Ashwaveega News 24×7 ಏಪ್ರಿಲ್ 8 – 2026 : ಅಮೆರಿಕ – ಇರಾನ್ ನಡುವಿನ ಕದನ ವಿರಾಮದ ನಡುವೆ ಹೊಸ ತಿರುವು ಎದುರಾಗಿದೆ. ತಾತ್ಕಾಲಿಕ ಶಾಂತಿ ಘೋಷಣೆಯಾದರೂ, ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಇರಾನ್ ಒಟ್ಟು 10 ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಕ್ಕೆ ಇರಾನ್ ಸ್ಪಷ್ಟ ಸಂದೇಶ ನೀಡಿದ್ದು, ಶಾಂತಿ ಒಪ್ಪಂದಕ್ಕೆ ಈ ಷರತ್ತುಗಳು ಅನಿವಾರ್ಯವೆಂದು ತಿಳಿಸಿದೆ.
ಇರಾನ್ ಮುಂದಿಟ್ಟಿರುವ ಪ್ರಮುಖ 10 ಷರತ್ತುಗಳು ಇಂತಿವೆ :
- ಇರಾನ್ ಮೇಲೆ ಮತ್ತೆ ಯಾವುದೇ ದಾಳಿ ನಡೆಯುವುದಿಲ್ಲ ಎಂಬ ಖಚಿತ ಭರವಸೆ ನೀಡಬೇಕು.
- ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಇರಾನ್ ಕೈಯಲ್ಲೇ ಮುಂದುವರಿಯಬೇಕು.
- ಲೆಬನಾನ್ ಹಾಗೂ ಯೆಮೆನ್ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
- ಯುದ್ಧದಿಂದ ಉಂಟಾದ ಹಾನಿಗೆ ಇರಾನ್ ಪುನರ್ನಿರ್ಮಾಣ ವೆಚ್ಚಗಳನ್ನು ಅಮೆರಿಕ ಪಾವತಿಸಬೇಕು.
- ಇರಾನ್ ಮೇಲಿನ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು.
- ಭದ್ರತಾ ಮಂಡಳಿ ಹಾಗೂ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಆಡಳಿತ ಮಂಡಳಿಯ ನಿರ್ಣಯಗಳನ್ನು ರದ್ದುಪಡಿಸಬೇಕು.
- ಅಮೆರಿಕ ತನ್ನ ಸೇನಾ ಪಡೆಗಳನ್ನು ಪ್ರದೇಶದಿಂದ ಹಿಂತೆಗೆದುಕೊಳ್ಳಬೇಕು.
- ಮುಟ್ಟುಗೋಲು ಹಾಕಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಬೇಕು.
- ಭವಿಷ್ಯದಲ್ಲಿ ಆಕ್ರಮಣಶೀಲ ನೀತಿ ಅನುಸರಿಸದಿರುವ ಬಗ್ಗೆ ಬದ್ಧತೆ ತೋರಿಸಬೇಕು.
- ಕೊಲ್ಲಿ ಪ್ರದೇಶದಲ್ಲಿನ ಎಲ್ಲಾ ಸಂಘರ್ಷಗಳನ್ನು ಅಂತ್ಯಗೊಳಿಸುವತ್ತ ಕ್ರಮ ಕೈಗೊಳ್ಳಬೇಕು.
ಈ ಷರತ್ತುಗಳು ಶಾಂತಿ ಮಾತುಕತೆಗೆ ಹೊಸ ಆಯಾಮ ನೀಡಿದ್ದು, ಮುಂದಿನ ದಿನಗಳಲ್ಲಿ ಅಮೆರಿಕದ ಪ್ರತಿಕ್ರಿಯೆ ಯಾವ ರೀತಿಯಿರುತ್ತದೆ ಎಂಬುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.
