Several autorickshaws queue up outside an LPG filling station to refill their tanks amid LPG shortage and limited stock availability in Bengaluru on Tuesday. DH PHOTO/PUSHKAR V
Ashwaveega News 24×7 ಏಪ್ರಿಲ್ 8 – 2026 : ಬೆಂಗಳೂರು : ಬೆಂಗಳೂರು ನಗರದಲ್ಲಿ ಆಟೋ ಚಾಲಕರಿಗೆ ತೀವ್ರ ಸಂಕಷ್ಟ ಎದುರಾಗಿದೆ . ಆಟೋ ಗ್ಯಾಸ್ ಕೊರತೆ ಹಿನ್ನೆಲೆ, ಎಲ್ಲೆಡೆ ಚಾಲಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .
“ನೋ ಸ್ಟಾಕ್” ಎಂಬ ಬೋರ್ಡ್ ಹಾಕಿದ್ದರೂ, ಗ್ಯಾಸ್ ಬಂಕ್ಗಳ ಮುಂದೆ ಆಟೋಗಳ ದೀರ್ಘ ಸಾಲುಗಳು ಕಂಡುಬರುತ್ತಿವೆ. ಜೆ.ಸಿ. ರಸ್ತೆಯ ಗ್ಯಾಸ್ ಬಂಕ್ ಬಳಿ ಮಾತ್ರವೇ 500ಕ್ಕೂ ಹೆಚ್ಚು ಆಟೋಗಳು ಕ್ಯೂನಲ್ಲಿ ನಿಂತಿರುವ ದೃಶ್ಯಗಳು ಗಮನಸೆಳೆದಿವೆ .
ಖಾಸಗಿ ಬಂಕ್ಗಳಲ್ಲಿ ಪ್ರತಿ ಕೆ.ಜಿಗೆ 90ರಿಂದ 120 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಆದರೂ ಗ್ಯಾಸ್ ಸಿಗುವುದೇ ಕಷ್ಟ. ಒಂದು ಸಿಲಿಂಡರ್ ಪಡೆಯಲು 4 ರಿಂದ 5 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಲಕರ ನೋವು ಮತ್ತಷ್ಟು ಗಂಭೀರವಾಗಿದೆ. ಕೆಲವರು ಕಾಲು ನೋವಿದ್ದರೂ ಸಾಲಿನಲ್ಲಿ ನಿಂತು ಗ್ಯಾಸ್ಗಾಗಿ ಕಾಯುತ್ತಿದ್ದಾರೆ. “ನಾವೆಲ್ಲರೂ ಬೆಳಗ್ಗೆ 6 ಗಂಟೆಯಿಂದಲೇ ಗ್ಯಾಸ್ಗಾಗಿ ಕಾಯುತ್ತಿದ್ದೇವೆ. ಎಲ್ಪಿಜಿ ಸಿಗದೇ ಆಟೋಗಳನ್ನು ತಳ್ಳಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಹೀಗಾದರೆ ನಾವು ಜೀವನ ನಡೆಸೋದು ಹೇಗೆ ?” ಎಂದು ಚಾಲಕರು ಪ್ರಶ್ನಿಸುತ್ತಿದ್ದಾರೆ .
ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ಆಟೋ ಚಾಲಕ ನವಾಜ್ ಮಾತನಾಡಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ .
ಒಟ್ಟಾರೆ, ಗ್ಯಾಸ್ ಬಿಕ್ಕಟ್ಟು ಆಟೋ ಚಾಲಕರ ಬದುಕಿಗೆ ದೊಡ್ಡ ಹೊಡೆತ ನೀಡಿದ್ದು, ಸರ್ಕಾರ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ .
