Ashwaveega News 24×7 ಏಪ್ರಿಲ್ 8 – 2026 : ಬೆಂಗಳೂರು : ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಈ ಸೀಸನ್ನ ಫಿನಾಲೆ ಹಂತಕ್ಕೆ ತಲುಪಿದ್ದು, ವೀಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. ಫಿನಾಲೆ ಎಪಿಸೋಡ್ಗಳು ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರ ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರವಾಗಲಿದೆ .
ಈ ಸೀಸನ್ನಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಪ್ರೊಫೆಷನಲ್ ಡ್ಯಾನ್ಸರ್ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಶಾಸ್ತ್ರೀಯ, ಜಾನಪದ ಹಾಗೂ ಸಿನಿಮಾ ಶೈಲಿಯ ನೃತ್ಯಗಳು ಕಥಾನಕ ಅಥವಾ ವಿಷಯ ಆಧಾರದಲ್ಲಿ ಪ್ರದರ್ಶಿಸಲ್ಪಟ್ಟಿದ್ದು, ವೀಕ್ಷಕರಿಗೆ ಭಾವನಾತ್ಮಕ ಅನುಭವ ನೀಡಿದೆ .
ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ತೀರ್ಪುಗಾರರಾಗಿ ಸ್ಪರ್ಧಿಗಳ ಹಾವ್, ಭಾವ, ಕಾರ್ಡಿನೇಷನ್ ಮತ್ತು ಓವರ್ಆಲ್ ಪ್ರೆಸೆಂಟೇಷನ್ ಅಳೆಯುತ್ತಿದ್ದಾರೆ. ನಿರೂಪಕ ಅನುಶ್ರೀ ಶೋ ನಿರೂಪಣೆಯನ್ನು ನಡೆಸುತ್ತಿದ್ದಾರೆ.

ಫೈನಲಿಸ್ಟ್ ಜೋಡಿಗಳು:
- ಪೂಜಾ & ಅನೂಪ್
- ಸಿದ್ದೇಗೌಡ್ರು & ದೀಶಲ್
- ಮೋಹಿತ್ & ಅನನ್ಯ
- ಹರ್ಷ & ನಂದು
- ಶಿಕ್ಷಿತ್ ತಾಪಾ & ಸಂಜನಾ
ಈ ಜೋಡಿಗಳು ಫೈನಲ್ ಎಪಿಸೋಡ್ನಲ್ಲಿ ತಮ್ಮ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಪ್ರತಿಯೊಬ್ಬರ ಪರ್ಫಾರ್ಮೆನ್ಸ್ ಅದ್ಭುತವಾಗಿರುವುದರಿಂದ, ಯಾರು ಸೀಸನ್ ಗೆಲ್ಲತ್ತಾರೆ ಎಂದು ಹೇಳುವುದು ಕಷ್ಟ.
ವೀಕ್ಷಕರು ಜೀ ಕನ್ನಡ ನಲ್ಲಿ ಫಿನಾಲೆ ಎಪಿಸೋಡ್ಗಳು ಪ್ರಸಾರವಾಗುವ ದಿನಗಳು ಏಪ್ರಿಲ್ 11 ಮತ್ತು 12 ರಂದು, ಸಂಜೆ ಸಮಯದಲ್ಲಿ ವೀಕ್ಷಿಸಿ, ಸೀಸನ್ನ ವಿಜೇತರು ಯಾರು ಎಂದು ತಿಳಿದುಕೊಳ್ಳಬಹುದು. ಪ್ರತಿಯೊಬ್ಬ ಸ್ಪರ್ಧಿಯ ಶ್ರಮ, ಪ್ರತಿಭೆ ಮತ್ತು ನೃತ್ಯದ ಮೂಲಕ ಕಥೆ ಹೇಳುವ ಸಾಮರ್ಥ್ಯ ಫೈನಲ್ ಗೆ ಗೆಲುವಿನ ದಾರಿ ತೀರ್ಮಾನಿಸುತ್ತದೆ.
