Ashwaveega News 24×7 ಏಪ್ರಿಲ್ 8 – 2026 : ಬಿಗ್ ಬಾಸ್ ಖ್ಯಾತಿಯ ರಜತ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬೆದರಿಕೆ ಪ್ರಕರಣದಲ್ಲಿ ಇದೀಗ “ನಾಟ್ ಅರೆಸ್ಟೆಡ್ ಚಾರ್ಜ್ಶೀಟ್” ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಗಿರೀಶ್ ಕುಮಾರ್ ನಾಯ್ಡು ನೀಡಿದ ದೂರಿನ ಆಧಾರದಲ್ಲಿ ರಜತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ನ್ಯಾಯಾಲಯದ ಆದೇಶದಂತೆ ಎಫ್ಐಆರ್ ದಾಖಲಿಸಲಾಗಿತ್ತು.
ಪೊಲೀಸರು ಮೂರು ಬಾರಿ ನೋಟಿಸ್ ನೀಡಿದರೂ, ರಜತ್ ವಿಚಾರಣೆಗೆ ಹಾಜರಾಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ, ಇದೀಗ ಅವರ ವಿರುದ್ಧ “ನಾಟ್ ಅರೆಸ್ಟೆಡ್” ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ .
ದೂರುದಾರ ಗಿರೀಶ್ ನಾಯ್ಡು ಆರೋಪದ ಪ್ರಕಾರ, ರಜತ್ ಅವರ ಮನೆ ಬಳಿ ಬಂದು ಧಮ್ಕಿ ಹಾಕಿದ್ದಾನೆ. “ಹೊರಗೆ ಬಾ… ಇಲ್ಲವಾದರೆ ಹುಡುಗರನ್ನು ಕಳುಹಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ದಾಖಲೆಗಳ ಸಮೇತ ದೂರು ನೀಡಲಾಗಿದೆ.
ಒಟ್ಟಾರೆ, ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
