Ashwaveega News 24×7 ಏಪ್ರಿಲ್ 9 – 2026 : ತುಮಕೂರಿನಲ್ಲಿ ಸಿಎಂ ಘೋಷಣೆ ನೆರವೇರದ ಹಿನ್ನೆಲೆ, ಮಹಿಳೆಯೊಬ್ಬರು ಹಾಡಿನ ಮೂಲಕ ತಮ್ಮ ಸಂಕಷ್ಟವನ್ನು ಹೊರಹಾಕಿದ ಘಟನೆ ಗಮನ ಸೆಳೆಯುತ್ತಿದೆ.
2024ರಲ್ಲಿ ತುಮಕೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಗೆ 20X30 ಜಾಗ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇಂದಿಗೂ ಆ ಜಾಗ ನೀಡಲಾಗಿಲ್ಲ, ಹಕ್ಕುಪತ್ರವೂ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ಕಚೇರಿಗಳಿಗೆ ಅಲೆದಾಡುತ್ತಿರುವ ಮಹಿಳೆ ರಾಬಿಯಾ, “ಸಚಿವರು ಡಿಸಿ ಕಡೆ ಕಳುಹಿಸುತ್ತಾರೆ, ಡಿಸಿ ಕಮಿಷನರ್ ಕಡೆ ಕಳಿಸುತ್ತಾರೆ. ಆದರೆ ಯಾರೂ ಸಮಸ್ಯೆ ಪರಿಹರಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.6
ತಮ್ಮ ನೋವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ ರಾಬಿಯಾ, ಹಾಡಿನ ಮೂಲಕ ಸಿಎಂ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. “ಬಾರಯ್ಯ ಸಿದ್ದಯ್ಯ, ಬಾರಯ್ಯ ರಾಮಯ್ಯ” ಎಂದು ಹಾಡುತ್ತಾ ತಮ್ಮ ಸಮಸ್ಯೆಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.
ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂಬ ಸಂದೇಶ ಈ ಘಟನೆ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದೆ ಒಟ್ಟಾರೆ, ಭರವಸೆ ನೀಡಿದ ಯೋಜನೆಗಳು ಜಾರಿಗೆ ಬಾರದಿದ್ದರೆ ಜನರು ಎದುರಿಸುವ ಸಂಕಷ್ಟಕ್ಕೆ ಇದು ಉದಾಹರಣೆಯಾಗಿದೆ.
