Ashwaveega News 24×7 ಏಪ್ರಿಲ್ 9 – 2026 : ಹಾವೇರಿ ಹಾನಗಲ್ ತಾಲ್ಲೂಕಿನ Gondi Cross ಬಳಿ ವಿದ್ಯಾರ್ಥಿಗಳು ಶಾಲೆಗೆ ಮತ್ತು ಕಾಲೇಜಿಗೆ ತಲುಪಲು ಬಸ್ ಸಿಗದೇ ಪರದಾಟ ನಡೆಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ಬಸ್ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿದ್ದು, ಗೊಂಡಿ ಕ್ರಾಸ್ ಮುಖಾಂತರ ಹಾವೇರಿ, ಶಿವಮೊಗ್ಗ, ಹಾನಗಲ್ ಮಾರ್ಗಗಳಲ್ಲಿ 10ಕ್ಕೂ ಹೆಚ್ಚು ಬಸ್ ಸಂಚಾರ ನಡೆಸಲ್ಪಡುವುದಾದರೂ, ಯಾವುದೇ ಬಸ್ ಸ್ಟಾಪ್ ಮಾಡುತ್ತಿಲ್ಲ.
ವಿದ್ಯಾರ್ಥಿಗಳು ನಿರಂತರವಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪರಿಣಾಮವಿಲ್ಲದೆ ಬಸ್ ಸೇವೆಯಲ್ಲಿ ಅಸಮರ್ಪಕತೆ ಮುಂದುವರಿದಿದೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಬಸ್ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು .
ಸ್ಥಳಕ್ಕೆ ಬಸ್ ಡಿಪೋ ವ್ಯವಸ್ಥಾಪಕ ಬಂದಿದ್ದು, ಬಸ್ ನಿಲ್ಲಿಸುವ ಭರವಸೆ ನೀಡಿದ್ದಾರೆ. ಈ ಕ್ರಮದಿಂದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜಿಗೆ ಸುರಕ್ಷಿತವಾಗಿ ಮತ್ತು ಸಮಯಕ್ಕೆ ತಲುಪಲು ಸಾಧ್ಯವಾಗಲಿದೆ .
