Ashwaveega News 24×7 ಏಪ್ರಿಲ್ 11 – 2026 : ಮಧ್ಯಪ್ರಾಚ್ಯದ ತೀವ್ರ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕದ ಅತ್ಯಾಧುನಿಕ ನಿಗಾವಾಹಕ ಡ್ರೋನ್ ಏಕಾಏಕಿ ನಾಪತ್ತೆಯಾಗಿರುವ ಘಟನೆ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ನೌಕಾಪಡೆಯ ಅತ್ಯಂತ ದುಬಾರಿ ಮಾನವರಹಿತ ಡ್ರೋನ್ MQ-4C Triton ಹಾರ್ಮುಜ್ ಜಲಸಂಧಿ ಪ್ರದೇಶದ ಮೇಲೆ ನಿಗಾವಹಿಸುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡಿದೆ. ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಈ ಡ್ರೋನ್, ಉನ್ನತ ಮಟ್ಟದ ಗುಪ್ತಚರ ಮತ್ತು ಸಮುದ್ರ ನಿಗಾವಹಣಕ್ಕಾಗಿ ಬಳಸಲಾಗುತ್ತದೆ.
ಇಟಲಿಯ Naval Air Station Sigonella ವಾಯುನೆಲೆಗೆ ಮರಳುವಾಗ ಡ್ರೋನ್ ದಿಢೀರ್ ಮಿಸ್ಸಿಂಗ್ ಆಗಿದೆ. ತುರ್ತು ಪರಿಸ್ಥಿತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿತಗೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ .
ಈ ಘಟನೆಯ ನಂತರ ಅಮೆರಿಕ ತುರ್ತು ಪರಿಶೀಲನೆ ಆರಂಭಿಸಿದ್ದು, ಡ್ರೋನ್ ಪತನವಾಗಿದೆಯೇ ಅಥವಾ ತಾಂತ್ರಿಕ ದೋಷದಿಂದ ಸಂಪರ್ಕ ಕಡಿತವಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮತ್ತೊಂದೆಡೆ, ಇರಾನ್ ಈ ಡ್ರೋನ್ ಅನ್ನು ಹೊಡೆದಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ.
ಗಮನಾರ್ಹವಾಗಿ, ಹಾರ್ಮುಜ್ ಜಲಸಂಧಿ ಪ್ರದೇಶವು ಜಾಗತಿಕ ತೈಲ ಸಾಗಾಟದ ಪ್ರಮುಖ ಮಾರ್ಗವಾಗಿದ್ದು, ಈ ಪ್ರದೇಶದಲ್ಲಿ ಯಾವುದೇ ಸೈನಿಕ ಘಟನೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ಈ ಡ್ರೋನ್ ನಾಪತ್ತೆ ಪ್ರಕರಣವು ಅಮೆರಿಕಾ-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ಸ್ಪಷ್ಟ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
