Ashwaveega News 24×7 ಏಪ್ರಿಲ್ 12 – 2026 : ದಾವಣಗೆರೆ : ಉಪಚುನಾವಣೆ ಕಣ ರಂಗೇರಿರುವ ಸಂದರ್ಭದಲ್ಲಿ ಸಚಿವ S. S. Mallikarjun ಅವರು ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮ್ಮಪ್ಪನ ಲೀಡ್ ಮೀರಿಸ್ತಾನೆ ನನ್ನ ಮಗ” ಎಂದು ಹೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆಲುವಿನ ಬಗ್ಗೆ ಆತ್ಮವಿಶ್ವಾಸ ತೋರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಮ್ಮದು ಎಲ್ಲವೂ ಓಪನ್ ರಾಜಕೀಯ. ಒಳಗೆ ಹೋಗಿ ಯಾವುದೇ ವ್ಯವಹಾರ ಮಾಡೋ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, “ಪ್ರತಿಯೊಂದು ಸಮಾಜವೂ ನಮ್ಮನ್ನು ಕೈಹಿಡಿದಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಿದೆ” ಎಂದರು.
ಹಿಂದಿನ ಚುನಾವಣೆಯ ಕುರಿತು ಮಾತನಾಡಿದ ಅವರು, “ಈ ಹಿಂದಿನ ಎಲೆಕ್ಷನ್ಗಳು ಬಹಳ ಟೈಟ್ ಆಗಿ ನಡೆದವು. ಆದರೆ ಈ ಬಾರಿ ಅಂಥ ಪರಿಸ್ಥಿತಿ ಕಾಣಿಸುತ್ತಿಲ್ಲ” …
ಇನ್ನಷ್ಟು ವಿಶ್ವಾಸ ವ್ಯಕ್ತಪಡಿಸಿದ ಮಲ್ಲಿಕಾರ್ಜುನ್, “ಶಾಮನೂರು ಲೀಡ್ನನ್ನೂ ಸಮರ್ಥ್ ಮೀರಿಸುವ ಸಾಧ್ಯತೆ ಇದೆ. ದೊಡ್ಡಮಟ್ಟದ ಲೀಡ್ ಬರುತ್ತದೆ. ಅದಿಲ್ಲದಿದ್ದರೂ ಸಣ್ಣ ಮಟ್ಟದ ಅಂತರದಲ್ಲಿ ಗೆಲುವು ಖಚಿತ” ಎಂದು ಹೇಳಿದರು.
Indian National Congress ಗೆಲುವು ಖಚಿತವಾಗಿದ್ದು, ಸಮರ್ಥ್ ಗೆಲುವು ಅನಿವಾರ್ಯ ಎಂದು ಮಲ್ಲಿಕಾರ್ಜುನ್ ಪುನರುಚ್ಚರಿಸಿದ್ದಾರೆ.
