Ashwaveega News 24×7 ಏಪ್ರಿಲ್ 12 – 2026 : ಬೆಂಗಳೂರು ವಿಮಾನ ನಿಲ್ದಾಣ : ಕ್ಯಾಬಿನೆಟ್ ಪುನಾರಚನೆ ಸದ್ದು ಗರಿಗೆದರಿರುವ ನಡುವೆ, Indian National Congress ಶಾಸಕರು ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ದಂಡಯಾತ್ರೆ ನಡೆಸುತ್ತಿದ್ದಾರೆ. ಈ ನಡುವೆ ಆನೇಕಲ್ ಶಾಸಕ Shivanna ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಾನು ಮೂರು ಸಲ ಶಾಸಕನಾಗಿದ್ದೇನೆ. ಹೀಗಾಗಿ ಮಂತ್ರಿ ಸ್ಥಾನಕ್ಕೆ ಅರ್ಹನಾಗಿದ್ದೇನೆ, ನನಗೆ ಅವಕಾಶ ಕೊಡಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
“ಸಚಿವ ಸ್ಥಾನ ಕೇಳಲು ನಾವು ದೆಹಲಿಗೆ ಹೋಗುತ್ತಿದ್ದೇವೆ. ಹಲವಾರು ಶಾಸಕರು ಇಂದು ದೆಹಲಿಗೆ ತೆರಳುತ್ತಿದ್ದೇವೆ” ಎಂದು ತಿಳಿಸಿದ ಶಿವಣ್ಣ, “ಎಲ್ಲಾ ಶಾಸಕರ ಬೇಡಿಕೆಗಳನ್ನು ಒಟ್ಟುಗೂಡಿಸಿ ಹೈಕಮಾಂಡ್ ಮುಂದೆ ಇಡುತ್ತೇವೆ” ಎಂದರು.
ಈ ವೇಳೆ Rahul Gandhi, Mallikarjun Kharge ಹಾಗೂ Randeep Singh Surjewala ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕ್ಯಾಬಿನೆಟ್ ಪುನಾರಚನೆ ಕುರಿತಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನ ಹೆಚ್ಚುತ್ತಿರುವ ನಡುವೆಯೇ, ಶಾಸಕರ ದೆಹಲಿ ಟೂರ್ ಮತ್ತಷ್ಟು ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ.
