
ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ, ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ನಾಗಸಂದ್ರ-ಮಾದಾವರ (BIEC) ವಿಸ್ತಾರ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸುವ ಹಿನ್ನೆಲೆಯಲ್ಲಿ, ಈ ಮಾರ್ಗದ ಮೆಟ್ರೋ ಸಂಚಾರ ವೇಳೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡುವಾಗದೆ.
ಈ ಸಮಯದಲ್ಲಿ ಮೆಟ್ರೋ ಸಂಚಾರಕ್ಕೆ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ:
- ಆಗಸ್ಟ್ 13: ನಾಗಸಂದ್ರ ನಿಲ್ದಾಣದಿಂದ ಕೊನೆಯ ಮೆಟ್ರೋ ಸಂಚಾರ ರಾತ್ರಿ 11:00 ಗಂಟೆಯ ಬದಲು 10:00 ಗಂಟೆಗೆ ನಡೆಯಲಿದೆ.
- ಆಗಸ್ಟ್ 14: ಮೆಟ್ರೋ ಸೇವೆಯ ಪ್ರಾರಂಭ ಬೆಳಿಗ್ಗೆ 5:00 ಗಂಟೆಯ ಬದಲು 6:00 ಗಂಟೆಗೆ ಆರಂಭವಾಗಲಿದೆ. ಕೊನೆಯ ರೈಲು ಸೇವೆ ರಾತ್ರಿ 11:00 ಗಂಟೆಯ ಬದಲು 10:00 ಗಂಟೆಗೆ ಕೊನೆಗೊಳ್ಳುತ್ತದೆ.
- ಆಗಸ್ಟ್ 15: ನಾಗಸಂದ್ರ ನಿಲ್ದಾಣದಿಂದ ಮೊದಲ ಮೆಟ್ರೋ ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗುತ್ತದೆ, ಬೆಳ್ಳಿಗ್ಗೆ 5:00 ಗಂಟೆಯ ಬದಲು.
ಆದಾಗ್ಯೂ, ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ:
- ಆಗಸ್ಟ್ 13 ಮತ್ತು 14: ಕೊನೆಯ ಮೆಟ್ರೋ ಸಂಚಾರ ರಾತ್ರಿ 11:12 ಗಂಟೆಯವರೆಗೆ ಲಭ್ಯವಿರುತ್ತದೆ.
- ಆಗಸ್ಟ್ 14 ಮತ್ತು 15: ಮೊದಲ ಮೆಟ್ರೋ ಬೆಳಿಗ್ಗೆ 5:00 ಗಂಟೆಗೆ ಪ್ರಾರಂಭವಾಗುತ್ತದೆ.
ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ದಿನಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯವನ್ನು ಬದಲಾಯಿಸಿಕೊಂಡು ಅನುಕೂಲ ಮಾಡಿಕೊಳ್ಳಲು ಬಿ.ಎಂ.ಆರ್.ಸಿ.ಎಲ್. ಮನವಿ ಮಾಡಿದೆ.