
ಬೆಂಗಳೂರು: ಸಿಲಿಕಾನ್ ಸಿಟಿಯ ಪಿಜಿಗಳಿಗೆ (ಪೇಯಿಂಗ್ ಗೇಸ್ಟ್) ಪಾಲಿಕೆ ಶಾಕ್ ನೀಡಿದೆ. ಇತ್ತೀಚೆಗೆ ಪಾಲಿಕೆ ಪಿಜಿಗಳಿಗೆ ಸಂಬಂಧಿಸಿದಂತೆ ಗೈಡ್ ಲೈನ್ ಅನ್ನು ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 15ರೊಳಗೆ ಅವುಗಳನ್ನು ಅಳವಡಿಸದೇ ಇದ್ದರೆ ಲೈಸೆನ್ಸ್ ರದ್ದು ಮಾಡಲು ಎಚ್ಚರಿಕೆ ನೀಡಿದೆ.
ಪಾಲಿಕೆ, ಈ ಗೈಡ್ ಲೈನ್ಸ್ ಅಳವಡಿಸಲು ಪಿಜಿಗಳಿಗೆ ಗಡುವು ನೀಡಿದ್ದು, ಅದನ್ನು ಮೀರಿದರೆ ಅವುಗಳನ್ನು ಅನಧಿಕೃತ ಎಂದು ಪರಿಗಣಿಸಿ ಲೈಸೆನ್ಸ್ ರದ್ದುಪಡಿಸಲಾಗುವುದು. ಜೊತೆಗೆ, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ಮಾಹಿತಿಯನ್ನು ಕೂಡಾ ಕಲೆಹಾಕುತ್ತಿದೆ.
ಈವರೆಗೆ ಪಾಲಿಕೆಯಲ್ಲಿ ಕೇವಲ 2 ಸಾವಿರ ಪಿಜಿಗಳಿಗೆ ಮಾತ್ರ ಲೈಸೆನ್ಸ್ ವಿತರಿಸಲಾಗಿದೆ, ಆದರೆ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 15ರೊಳಗೆ ಲೈಸೆನ್ಸ್ ಪಡೆಯಲು ತಾಕೀತು ಮಾಡಿರುವ ಪಾಲಿಕೆ, ಇದು ಮಾಡುವಂತೆ ಸೂಚಿಸಿದೆ. ಇಲ್ಲವಾದರೆ, ಅನಧಿಕೃತ ಪಿಜಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.