
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ಬಾಕಿ ಉಳಸಿಕೊಂಡಿರುವ ಮಾಲೀಕರಿಗೆ ಬಿಗಿ ಕ್ರಮ ಕೈಗೊಂಡಿದ್ದು, ಒಟ್ಟು 4,600 ಕಟ್ಟಡಗಳಿಗೆ ಬೀಗಮುದ್ರೆ ಹಾಕಿದೆ.
ಬಿಬಿಎಂಪಿ ಹೇಳಿದಂತೆ, ಈ ಕಟ್ಟಡ ಮಾಲೀಕರಿಂದ ಒಟ್ಟು ₹474.77 ಕೋಟಿ ಅಸ್ತಿ ತೆರಿಗೆ ಬಾಕಿಯಾಗಿದೆ. ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೇ ಇದ್ದ ಮಾಲೀಕರು OTS (ಒಂದೇ ಬಾರಿಗೆ ತೆರಿಗೆ ಪಾವತಿ) ಯೋಜನೆಯ ಮೂಲಕ ತೆರಿಗೆ ಪಾವತಿಸಲು ಅವಕಾಶ ಪಡೆದಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ.
ಬಿಬಿಎಂಪಿಯು ಕಳೆದ ಒಂದು ವಾರದಲ್ಲಿ 26,862 ಮಾಲೀಕರಿಂದ ₹26.94 ಕೋಟಿ ಅಸ್ತಿ ತೆರಿಗೆ ಸಂಗ್ರಹಿಸಿದೆ. ಬಾಕಿ ಉಳಸಿಕೊಂಡಿರುವ 50 ಸಾವಿರಕ್ಕೂ ಹೆಚ್ಚು ಅಸ್ತಿಗಳನ್ನು ಮುಟ್ಟುಗೊಲು ಹಾಕಲು ಪಾಲಿಕೆ ಸಿದ್ಧವಾಗಿದ್ದು, ಈ ವರೆಗೆ 14,906 ಅಸ್ತಿಗಳನ್ನು ಮುಟ್ಟುಗೊಲು ಹಾಕಲಾಗಿದೆ.
ಬಿಬಿಎಂಪಿ ವಲಯವಾರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಇನ್ನಷ್ಟು ಕಟ್ಟಡಗಳಿಗೆ ಬೀಗಮುದ್ರೆ ಹಾಕುವ ಪ್ರಕ್ರಿಯೆ ಮುಂದುವರೆಯಲಿದೆ.