
ಬೆಂಗಳೂರು:
ಕಳೆದ ನಾಲ್ಕು ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಲ್ಯಾಣಿಗಳಲ್ಲಿ ಒಟ್ಟು 5 ಲಕ್ಷ ಗಣೇಶ್ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಗಣೇಶ್ ಚೌತಿಯ ದಿನದಂದು ಮಾತ್ರವೇ 2.13 ಲಕ್ಷ ಮೂರ್ತಿಗಳ ವಿಸರ್ಜನೆ ನಡೆದಿದೆ.
ಎರಡನೇ ದಿನದಲ್ಲಿ 83 ಸಾವಿರ ಗಣೇಶ್ ಮೂರ್ತಿಗಳು ಸಿಲಿಕಾನ್ ಸಿಟಿಯಲ್ಲಿ ವಿಸರ್ಜನೆಗೊಂಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಲಯಗಳಲ್ಲಿ ಮೂರ್ತಿಗಳ ವಿಸರ್ಜನೆ ವಿವರ ಈ ಕೆಳಗಿನಂತಿದೆ:
- ಪೂರ್ವ ವಲಯ: 29,586
- ಪಶ್ಚಿಮ ವಲಯ: 15,516
- ದಕ್ಷಿಣ ವಲಯ: 62,246
- ಬೊಮ್ಮನಹಳ್ಳಿ ವಲಯ: 3,790
- ದಾಸರಹಳ್ಳಿ ವಲಯ: 668
- ಮಹದೇವಪುರ ವಲಯ: 4,899
- ಆರ್.ಆರ್.ನಗರ ವಲಯ: 6,716
- ಯಲಹಂಕ ವಲಯ: 8,732
ಮೂರನೇ ದಿನದ ಕೊನೆಗಷ್ಟರಲ್ಲಿ ಒಟ್ಟು 1,32,153 ಗಣೇಶ್ ಮೂರ್ತಿಗಳ ವಿಸರ್ಜನೆ ನಡೆದಿದೆ.
