
ಕಳೆದ 30 ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನೂ ಚಿರಂಜೀವಿ ವಾಲ್ಟೇರ್ ವೀರಯ್ಯ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ವಿಶ್ವಂಭರ ಚಿತ್ರದೊಂದಿಗೆ ಮತ್ತೆ ದಾಖಲೆ ಬರೆಯಲು ಸಜ್ಜಾಗಿದ್ದು, ಇದೇ ವೇಳೆ ನಟ ತಮ್ಮ ಆದಾಯವನ್ನು ಹೂಡಿಕೆ ಮಾಡುತ್ತಿದ್ದಾರೆ.
ರಿಯಲ್ ಎಸ್ಟೇಟ್ನಲ್ಲಿ ಗಣನೀಯ ಹೂಡಿಕೆಗಳನ್ನು ಮಾಡುತ್ತಿರುವ ಚಿರಂಜೀವಿ ಹೈದರಾಬಾದ್ನಲ್ಲಿರುವ ಅತ್ಯಂತ ದುಬಾರಿ ಆಸ್ತಿಗಳನ್ನು ಹೊಂದಿದ್ದು, ಇದೀಗ ಊಟಿಯಲ್ಲಿ 5.5 ಎಕರೆಯ ಬರೋಬ್ಬರಿ 16 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ.

ಈಗಾಗಲೇ ಚಿರಂಜೀವಿ ಅವರು ಹೈದರಾಬಾದ್,ಬೆಂಗಳೂರು ಸೇರಿದಂತೆ ಹಲವೆಡೆ ಆಸ್ತಿ ಹೊಂದಿದ್ದು, ಇದೀಗ ಊಟಿಯ ಗುಡ್ಡದ ಪ್ರದೇಶದಲ್ಲಿ 5.5 ಎಕರೆ ಜಾಗವನ್ನು ಖರೀದಿಸಿದ್ದಾರೆ. ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಈ ಜಾಗಕ್ಕೆ ಅವರು 16 ಕೋಟಿ ರೂ. ನೀಡಿದ್ದಾರೆ ಎನ್ನಲಾಗುತ್ತಿದೆ.
ಚಿರಂಜೀವಿ ಖರೀದಿಸಿದ ಊಟಿಯ ಪ್ರಾಪರ್ಟಿಗೆ ಇತ್ತೀಚೆಗೆ ರಾಮ್ ಚರಣ್ ಮತ್ತು ಉಪಾಸನಾ ಕೂಡ ಭೇಟಿ ನೀಡಿದ್ದು, ಅವರು ಅಲ್ಲಿ ಐಷಾರಾಮಿ ಫಾರ್ಮ್ಹೌಸ್ ನಿರ್ಮಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅನುಮತಿ ಪಡೆಯಲು ಪ್ರಸ್ತುತ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : https://ashwaveega.com/darshan-and-gang-renukaswamy-murder-case-judicial-custody-extension/