
ಮನುಷ್ಯರ ದೇಹವು ಸುಮಾರು 55 ರಿಂದ 60% ನೀರಿನಿಂದ ಕೂಡಿದ್ದು, ನಮ್ಮ ದೇಹದಲ್ಲಿನ ಪ್ರತಿಯೊಂದು ಅಂಗಗಳು ಹಾಗೂ ಜೀವಕೋಶಗಳು ಮತ್ತು ಅಂಗಾಂಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಬಹುಮುಖ್ಯವಾಗಿದೆ. ಅದಕ್ಕಾಗಿಯೇ ಮನುಷ್ಯರು ಪ್ರತಿದಿನ 3 ರಿಂದ 4 ಲೀಟರ್ ನೀರು ಕುಡಿಯುವುದು ಬಹಳ ಮುಖ್ಯ ಎಂದು ಹೇಳಲಾಗಿದೆ.
ದಿನಕ್ಕೆ ಮಹಿಳೆಯರು 3 ಲೀಟರ್ ನೀರು ಹಾಗೂ ಪುರುಷರು 4 ಲೀಟರ್ ನೀರು ಕುಡಿಯುವುದರಿಂದ ನಮ್ಮ ದೈನಂದಿನ ಆರೋಗ್ಯದ ಶ್ರೇಣಿ ಮತ್ತು ಆರೋಗ್ಯದ ಪರಿಸ್ಥಿತಿ ಅನುಗುಣವಾಗಿ ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಇನ್ನೂ ಮನುಷ್ಯನು ನೀರನ್ನು ಕಡಿಮೆ ಕುಡಿದರೆ ತ್ರೀವ ತಲೆಯ ನೋವು ಕಾಣಿಸಿಕೊಳ್ಳುತ್ತದೆ. ನೀವು ತಲೆನೋವಿನಿಂದ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ, ಮೊದಲು ನೀರನ್ನು ಕುಡಿಯಲು ಪ್ರಯತ್ನಿಸಿ. ಔಷಧಿಗಳನ್ನು ತೆಗೆದುಕೊಳ್ಳುವ ಅಥವಾ ನಿಮ್ಮ ವೈದ್ಯರನ್ನು ನೋಡುವುದಕ್ಕಿಂತ ಇದು ಸುಲಭವಾದ ಪರಿಹಾರವಾಗಿದೆ.
ಇದನ್ನೂ ಓದಿ : https://ashwaveega.com/raagi-soup-recipe-how-to-make-raagi-vegetable-soup-updates/