
ಚಿಕ್ಕೋಡಿ : ವಸತಿ ಶಾಲೆಯ ಮಹಡಿಯಿಂದ ಬಿದ್ದು ಪಿಯು ವಿದ್ಯಾರ್ಥಿನಿ ಸಾವನ್ನಪಿದ್ದು, ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.
ಹೌದು ವಸತಿ ಶಾಲೆಯ ಮೊದಲನೇ ಮಹಡಿಯಿಂದ ಬಿದ್ದು ಪಿಯು ವಿದ್ಯಾರ್ಥಿನಿ ಸಾವನ್ನಪಿದ್ದರೆ. ಇಂದು ಪರೀಕ್ಷೆ ಇರುವ ಕಾರಣದಿಂದ ಮಧ್ಯ ರಾತ್ರಿ ಮೊದಲ ಮಹಡಿಯಲ್ಲಿ ವಿದ್ಯಾರ್ಥಿನಿ ಓದುತ್ತ ಕುಳಿತಿದ್ದ ವಿದ್ಯಾರ್ಥಿನಿ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಆಪ್ರೀನ್ ಜಮಾದಾರ 17 ಮೃತ ದುರ್ದೈವಿ ವಿದ್ಯಾರ್ಥಿನಿ ಎಂದು ಹೇಳಲಾಗಿದ್ದು, ಮೃತ ಬಾಲಕಿ ಗೋಕಾಕ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದವರು ಎನ್ನಲಾಗಿದೆ.
ಇನ್ನೂ ವಿದ್ಯಾರ್ಥಿನಿಯ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ರಾತ್ರಿ ಸಮಯ 2:30 ಕ್ಕೆ ವಿದ್ಯಾರ್ಥಿನಿ ಹಾಸ್ಟೆಲ್ನಿಂದ ಬಿದ್ದಿದು, ಆದರೆ ನಮಗೆ ಬೆಳಗಿನ ಜಾವ 4 ಗಂಟೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ಹಾಸ್ಟೆಲ್ ಸಿಬ್ಬಂದಿ ಹೇಳಿದ್ದಾರೆ. ಹಾಗೂ ನಾವು ಹುಡುಗಿಯ ಶವ ನೋಡಿದಾಗ ತಲೆ ಸೇರಿದಂತೆ ಕಿವಿಯಲ್ಲಿಯೂ ರಕ್ತಸ್ರಾವ ಆಗಿದೆ ಎಂದಿದ್ದು, ಆದರೆ ಇದು ಸಹಜ ಸಾವಲ್ಲ ಎಂದು ವಿದ್ಯಾರ್ಥಿನಿಯ ಪೋಷಕರು ಹೇಳುತ್ತಿದ್ದು, ಪ್ರಕರಣ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಿನ್ನೆಲೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.