
ಬೆಂಗಳೂರು : ಟ್ರಾಫಿಕ್ ಪೊಲೀಸರ ಜೊತೆ ಯುವತಿ ಕಿರಿಕ್ ಮಾಡಿಕೊಂಡಿದ್ದು, ಹಲ್ಲೆಗೆಯತ್ನಿಸಿದ ಘಟನೆ ನಡೆದಿದೆ. ಸೋನಂ ಎನ್ನುವ ಯುವತಿ ಹಲ್ಲೆಗೆ ಯತ್ನಿಸಿದ್ದು,ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್ ನಲ್ಲಿ ಘಟನೆ ನಡೆದಿದೆ.
ಸವಾರನ ಜೊತೆ ಕಿರಿಕ್ ತೆಗೆದಿದ್ದ ಸೋನಂ ಗಲಾಟೆ ಕಂಡು ಸಂಚಾರಿ ಪೊಲೀಸರು ಈ ವೇಳೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಇದೇ ವೇಳೆ ಪೊಲೀಸರ ಮೇಲೆನೆ ಯುವತಿ ಹಲ್ಲೆಗೆ ಯತ್ನಿಸಿದ್ದು, ಬಾಡಿ ಕ್ಯಾಮರ ಎಳೆದಾಡಿ ಕಿರಿಕ್ ಮಾಡಿದ್ದಾಳೆ.ಇನ್ನೂ ಇಂದಿರಾನಗರ ಠಾಣೆಯಲ್ಲಿ ಯುವತಿ ಮೇಲೆ ಎಫ್ ಐ ಆರ್ ದಾಖಲಗಿದ್ದು, ಯುವತಿ ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಾಹಿತಿ ತಿಳಿದು ಬಂದಿದೆ.