
ಹಾಸನ : ಇಂದಿನಿಂದ ಭಕ್ತರಿಗಾಗಿ ಹಾಸನ ಹಾಸನಾಂಬೆಯ ದರ್ಶನ ಅವಕಾಶ ನೀಡಿದ್ದು, ಇಂದು ಬೆಳಗ್ಗೆ 4 ಗಂಟೆಯಿಂದ ದರ್ಶನ ಅರಂಭವಾಗಿದೆ. ನಮ್ಮ ರಾಜ್ಯ ಅಲ್ಲಾದೆ ಬೇರೆ ರಾಜ್ಯಗಳಿಂದಲೂ ಭಕ್ತರು ರಾತ್ರಿ 11 ಗಂಟೆಯವರೆಗೆ ದೇವಿಯ ದರ್ಶನ ಪಡೆಯಲು ಆಗಮಿಸುತ್ತಿದ್ದು, ಹಾಸನಾಂಬೆ ದೇವಸ್ಥಾನವು ಈ ಬಾರಿ ಹತ್ತು ದಿನಗಳವರೆಗೆ ಮಾತ್ರ ತೆರೆದಿರುತ್ತದೆ ಎನ್ನಲಾಗಿದೆ.
ಹಿಂದಿನ ಮೈಸೂರು ಒಡೆಯರ್ ಅರಸೊತ್ತಿಗೆಯ ರಾಜವಂಶಸ್ಥರು ಅಪಾರ ದೈವಭಕ್ತರಾಗಿದ್ದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದ್ದು, ಇನ್ನೂ ಇದೇ ವೇಳೆ ಅಲ್ಲಿನ ರಾಜಮಾತೆ ಪ್ರಮೋದಾ ದೇವಿಯವರು ಮೊದಲ ದಿನವೇ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದರು. ಈಗಾಗಲೇ ವರದಿ ಮಾಡಿರುವಂತೆ ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುವ ಹಾಸನಾಂಬೆ ದೇಗುಲ ನಿನ್ನೆಯಷ್ಟೇ ಓಪನ್ ಆಗಿದ್ದು, ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿಯು ಸರ್ಕಾರೀ ಮರ್ಯಾದೆಗಳೊಂದಿಗೆ ರಾಜಮಾತೆ ಪ್ರಮೋದಾದೇವಿಯವರನ್ನು ಬರಮಾಡಿಕೊಂಡಿದ್ದಾರೆ.