
ಪುಷ್ಪ 2 ಸಿನಿಮಾದಲ್ಲಿ ಸಮಂತಾ ಬದಲಿಗೆ ಶ್ರೀ ಲೀಲಾಗೆ ಐಟಂ ಸಾಂಗಿಗೆ ಕುಣಿಯೋ ಅವಕಾಶ ಸಿಕ್ಕಿದ್ದು, ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ಶ್ರೀಲೀಲಾ ಪುಷ್ಪ 2 ಸಿನಿಮಾದಲ್ಲಿ ಸೊಂಟ ಕುಣಿಸಿದ್ದಾರೆ. ಸಾಂಗ್ ಶೂಟಿಂಗ್ ವಿಡಿಯೋ ಕೂಡ ಲೀಕ್ ಆಗಿದ್ದು, ಪುಷ್ಪ 2 ಫೀವರ್ ಜೋರಾಗಿದ್ದು, ಸಿನಿಮಾ ರಿಲೀಸ್ಗೆ ಇನ್ನೂ 24 ದಿನ ಬಾಕಿ ಇದ್ದು, ಸ್ಪೆಷಲ್ ಸಾಂಗ್ ಶೂಟಿಂಗ್ ಕೂಡ ನಡೆದಿದೆ. ಐಟಂ ಸಾಂಗಿನಲ್ಲಿ ಅಲ್ಲು ಅರ್ಜುನ್ ಜೊತೆ ನಟಿ ಶ್ರೀಲೀಲಾ ಮಸ್ತ್ ಡ್ಯಾನ್ಸ್ ಮಾಡಿದ್ದು, ಈ ಸ್ಪೆಷಲ್ ಸಾಂಗ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಪುಷ್ಪ 2 ಚಿತ್ರದಲ್ಲಿ ಸಮಂತಾ ಬದಲಿಗೆ ಶ್ರದ್ಧಾ ಕಪೂರ್ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು ಇದೀಗ ಈ ಪ್ಲೇಸ್ಗೆ ಸಮಂತಾ ಬಂದಿದ್ದು, ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿ ಶ್ರೀಲೀಲಾ ಡ್ಯಾನ್ಸ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ‘ಪುಷ್ಪ 2: ದಿ ರೂಲ್’ ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದ್ದು, ‘ಪುಷ್ಪ 2: ದಿ ರೂಲ್’ ಚಿತ್ರದ ಪುಷ್ಪಾ ಮತ್ತು ಸುಸೇಕಿ ಎರಡು ಹಾಡುಗಳು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಐಟಂ ಸಾಂಗ್ ಕೂಡ ಹಿಟ್ ಆಗೋದು ಪಕ್ಕಾ ಎನ್ನಲಾಗಿದ್ದು , ಪುಷ್ಪ 2 ಸಿನಿಮಾ ಧೂಳೆಬ್ಬಿಸೋದು ಪಕ್ಕಾ ಎನ್ನುವ ಮಾತು ಕೇಳಿಬರುತ್ತಿದೆ.
ಸುಕುಮಾರ್ ನಿರ್ದೇಶನ , ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿದು, ಶ್ರೀ ಲೀಲಾ ಫೋಟೋ ಲೀಕ್ ಆಗ್ತಿದ್ದಂತೆ ಚಿತ್ರತಂಡ ಕೂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಡ್ಯಾನ್ಸಿಂಗ್ ಕ್ವೀನ್ ಶ್ರೀ ಲೀಲಾ ಸಖತ್ ಆಗಿ ಕಾಣ್ತಿದ್ದಾರೆ. ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಪೆಷಲ್ ಸಾಂಗ್ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಸ್ಪೆಷಲ್ ಸಾಂಗಿಗೆ ಅಲ್ಲು ಅರ್ಜುನ್ ಜೊತೆ ಡ್ಯಾನ್ಸ್ ಮಾಡಲು ನಟಿ ಶ್ರೀಲೀಲಾ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಕೆಲ ನಟಿಯರು ಐಟಂ ಸಾಂಗಿ 2-3 ಕೋಟಿ ಪಡೆದ ಉದಾಹರಣೆ ಕೂಡ ಇದೆ. ಪುಷ್ಪ 2 ಸಿನಿಮಾ ವಿಶ್ವದಾದ್ಯಂತ 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಹಾಗೂ ಬಂಗಾಳಿ ಭಾಷೆಗಳಲ್ಲಿ 11,500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಇದುವರೆಗೆ ಭಾರತದ ಯಾವುದೇ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿಲ್ಲ.
ಡಿಸೆಂಬರ್ 5 ರಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದ್ದು, . ಅಲ್ಲು ಅರ್ಜುನ್ ಫ್ಯಾನ್ಸ್ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದಾರೆ. ನಾರ್ತ್ ನಲ್ಲೂ ಪುಪ್ಪರಾಜ್ ಕ್ರೇಜ್ ಜೋರಾಗಿಯೇ ಇದೆ. ಅದ್ಧೂರಿಯಾಗಿ ತೆರೆಗೆ ಬರಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿರುವ ಪುಷ್ಪ 2 ಚಿತ್ರ ಬಿಡುಗಡೆಯ ನಂತರ ಇನ್ನೆಷ್ಟು ದಾಖಲೆಗಳನ್ನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟು 11,500 ಸ್ಕ್ರೀನ್ಗಳಲ್ಲಿ, ಭಾರತದಲ್ಲಿ 6,500 ಸ್ಕ್ರೀನ್ಗಳು ಮತ್ತು ವಿದೇಶದಲ್ಲಿ 5,000 ಸ್ಕ್ರೀನ್ ಗಳಲ್ಲಿ ಪುಷ್ಪರಾಜ್ ಮಿಂಚಲಿದ್ದಾರೆ.
ಅಲ್ಲು ಅರ್ಜುನ್ ಪುಷ್ಪ ಸೀಕ್ವೆಲ್ ಮೇಲೆ ಪ್ರೇಕ್ಷಕರಿಗಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಟೀಸರ್ ಹಿಟ್ ಆದ ಮೇಲೆ ಬನ್ನಿ ಸಿನಿಮಾ ಕ್ರೇಜ್ ಹೆಚ್ಚಿದೆ. ಈ ಸಿನಿಮಾ ಸಾವಿರ ಕೋಟಿ ಬಾಚಿಕೊಳ್ಳೋದು ಪಕ್ಕಾ ಎಂದು ಈಗಾಗಲೇ ಎಲ್ಲರೂ ಫಿಕ್ಸ್ ಆಗಿದ್ದಾರೆ. ಪುಷ್ಪಾ ದಿ ರೈಸ್ ಬ್ಲಾಕ್ಬಸ್ಟರ್ ಆಯಿತು, ಇದೀಗ ಪುಷ್ಪ ದಿ ರೂಲ್ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಜೋರಾಗಿದೆ. ಹೊಸ ದಾಖಲೆಯನ್ನೇ ನಿರ್ಮಿಸಿದೆ. ಥಿಯೇಟ್ರಿಕಲ್, ಸ್ಯಾಟಲೈಟ್, OTT, ಮತ್ತು ಆಡಿಯೋ ಹಕ್ಕುಗಳು ಸೇರಿದಂತೆ ಪ್ರೀ-ರಿಲೀಸ್ ವ್ಯವಹಾರವು ಭಾರತದಾದ್ಯಂತ ಅತ್ಯುತ್ತಮವಾಗಿದೆ. ಅಲ್ಲು ಅರ್ಜುನ್ ಸಿನಿಮಾ ತೆರೆ ಮೇಲೆ ಅಬ್ಬರಿಸೋದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.