ಬೆಂಗಳೂರು: ವರ್ಷಕ್ಕೆ ಬೆಂಗಳೂರುನಲ್ಲಿ ಬಿಎಂಟಿಸಿಯ 320 ಎಲೆಕ್ಟ್ರಿಕ್ ಎಸಿ ಬಸ್ಸುಗಳು ಸಂಚರಿಸಲಿವೆ. ಟೆಂಡರ್ ಅನ್ನ ಅಶೋಕ್ ಲೇಲ್ಯಾಂಡ್ ಕಂಪನಿಯ ಪಾಲುದಾರ ಸಂಸ್ಥೆಯಾದ ಓಂ ಕಂಪನಿ ಪಡೆದುಕೊಂಡಿದೆ. ಈಗಾಗಲೇ ವರ್ಕ್ ಆರ್ಡರ್ ಕೂಡ ನೀಡಲಾಗಿದೆ.
ಒಂದು ಕಿಮೀ 65 ರೂ.ನಿಂದ 80 ಪೈಸೆಯಂತೆ ಬಿಎಂಟಿಸಿ ಈ ಬಸ್ಗಳಿಗೆ ಹಣ ನೀಡಲಿದೆ ಎಂದು ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರನ್ನು ಅಶೋಕ್ ಲೇಲ್ಯಾಂಡ್ ಕಂಪನಿ ನೇಮಕ ಮಾಡುತ್ತದೆ. ನಿರ್ವಾಹಕರನ್ನು ಸರ್ಕಾರ ನೇಮಕ ಮಾಡುತ್ತದೆ. ಡಿಸೆಂಬರ್ 15 ರ ನಂತರ ಟ್ರಯಲ್ ರನ್ಗಾಗಿ ಬಸ್ಗಳು ಬೆಂಗಳೂರಿಗೆ ಬರಲಿವೆ. ಈ ಎಸಿ ಎಲೆಕ್ಟ್ರಿಕ್ ಬಸ್ಗಳು ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಸದ್ಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಿಎಂಟಿಸಿಯ ವೋಲ್ವೋ ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈಗಿರುವ ಎಲ್ಲ ವೋಲ್ವೋ ಬಸ್ಸುಗಳು ನಗರದ ಬೇರೆ ಬೇರೆ ಮಾರ್ಗದಲ್ಲಿ ಸಂಚಾರ ಮಾಡಲಿವೆ.
ಈಗಾಗಲೆ ಬಿಎಂಟಿಸಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾರ್ಮಲ್ ಎಲೆಕ್ಟ್ರಿಕ್ ಬಸ್ಸುಗಳು ಸಂಚಾರ ಮಾಡುತ್ತಿದ್ದು, ಈ 320 ಎಸಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯಿಂದ ಬಿಎಂಟಿಸಿಯಲ್ಲಿ ಒಟ್ಟು ಎಲೆಕ್ಟ್ರಿಕ್ ಬಸ್ಗಳ ಸಂಖ್ಯೆ 1320 ಕ್ಕೆ ಏರಿಕೆ ಆಗಲಿದೆ. ಎಲೆಕ್ಟ್ರಿಕ್ ಬಸ್ನಲ್ಲಿ ತುಂಬಾ ಆರಾಮದಾಯಕವಾಗಿ ಸಂಚಾರ ಮಾಡಬಹುದು ಎಂದು ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.