
ಕರ್ನಾಟಕ ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಲ್ಲಿಯೇ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರವನ್ನು ಏರಿಸಿದೆ. ಒಂದೆಡೆ ಮಹಿಳೆಯರು ಫ್ರೀಯಾಗಿ ಬಸ್ಸಿನಲ್ಲಿ ಓಡಾತಿದ್ರೆ, ಇನ್ನೊಂದೆಡೆ ಪುರುಷ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಳ ಮಾಡಲಾಡಗಿದೆ. ಇದೀಗ ಉಚಿತ ಬಸ್ ಸೇವೆಯನ್ನು ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ ಅಂತ ನೋಡೋದಾದ್ರೆ ಬಸ್ಸಿನ 50 ಪ್ರಯಾಣಿಕರಲ್ಲಿ ಸುಮಾರು 30 ಮಂದಿ ಮಹಿಳಾ ಪ್ರಯಾಣಿಕರು. ಅವರು ಆಧಾರ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿರುವ 20 ಪುರುಷರು ಸಂಪೂರ್ಣ ಟಿಕೆಟ್ ಹಣ ಪಾವತಿಸಿ ಪ್ರಯಾಣ ಮಾಡ್ಬೇಕು. ಒಬ್ಬ ವಯಸ್ಸಾದ ವ್ಯಕ್ತಿ ದುಡ್ಡು ಕೊಡಲು ಹುಡುಕುತ್ತಾ ಹೆಣಗಾಡುತ್ತಿದ್ದರೆ, ಆತನ ಪಕ್ಕದಲ್ಲಿಯೇ ಕುಳಿತ ಹುಡುಗಿಯೊಬ್ಬಳು ವಿಡಿಯೋ ಕರೆಯಲ್ಲಿ ಮಾತನಾಡುತ್ತಾ ಆರಾಮವಾಗಿ ಪ್ರಯಾಣಿಸುತ್ತಿದ್ದಳು. ಅದು ನ್ಯಾಯವೇ ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ..
