
ಐಪಿಎಲ್ 2025ರ ಸೀಸನ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನ್ನಾಗಿ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಬಿಕರಿಯಾಗಿದ್ದ ಪಂತ್ ಐಪಿಎಲ್ನಲ್ಲಿ ಸಾಕಷ್ಷು ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೇ ಡೆಲ್ಲಿ ತಂಡಕ್ಕೆ ಕ್ಯಾಪ್ಟನ್ ಆಗಿಯೂ ಆಡಿದ್ದಾರೆ. ಹೀಗಾಗಿ ಲಕ್ನೋ ತಂಡಕ್ಕೆ ಪಂತ್ರನ್ನು ಆಯ್ಕೆ ಮಾಡಲಾಗಿದೆ ಎಂದು ತಂಡದ ಮಾಲೀಕ ಸಂಜೀವ್ ಗೋಯಂಕಾ ತಿಳಿಸಿದ್ದಾರೆ. ಈನ ಹಿಂದೆ ಲಕ್ನೋ ನಾಯಕರಾಗಿ ಕರ್ನಾಟಕದ ಕೆ ಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು.ಆದರೆ ಮಾಲೀಕ ಹಾಗೂ ಕೆಎಲ್ರವರ ನಡುವೆ ಭಿನ್ನಾಭಿಪ್ರಾಯದಿಂದ ಟೀಂನಿಂದ ರಾಹುಲ್ರನ್ನು ಕೈ ಬಿಡಲಾಗಿತ್ತು..,