
ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ 5 ಟಿ20 ಪಂದ್ಯಗಳ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಕೊಲ್ಕತ್ತಾದಲ್ಲಿ ನಡೆಯಲಿದೆ. ಅತಿಥೇಯ ತಂಡ ಭಾರತಕ್ಕೆ ಸೂರ್ಯಕುಮಾರ್ ನಾಯಕನಾದರೆ, ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕರಾಗಿದ್ದಾರೆ. ಟೀ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ,ಅಕ್ಷರ್ ಪಟೇಲ್,ರಿಂಕು ಸಿಂಗ್,ಶಮಿ, ಹರ್ಷಿತ್ ರಾಣಾ ರಂತಹ ಆಟಗಾರರಿದ್ದಾರೆ. ಆತ್ತ ಇಂಗ್ಲೆಂಡ್ ತಂಡದಲ್ಲಿಯೂ ಕೂಡ ಹೊಡಿಬಡಿಯ ಆಟಗಾರರಿದ್ದು ನಾಯಕನ ಜೊತೆ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್,ಜೆಕಬ್ ಬೆಥೆಲ್, ಹ್ಯಾರಿ ಬ್ರೂಕ್ , ಜೋಫ್ರಾ ಆರ್ಚರ್ನಂತಹ ಆಟಗಾರರಿದ್ದಾರೆ. ಎರಡು ತಂಡಗಳು ಪಿಚ್ಗೆ ತಕ್ಕಂತೆ ಪ್ಲೇಯಿಂಗ್ ಇಲೆವನ್ ಆಡಿಸುವ ಲೆಕ್ಕಾಚಾರದಲ್ಲಿದ್ದು, ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ.