
ಬಾಲಿವುಡ್ನ ಪ್ರಸಿದ್ದ ಕುಚ್ ಕುಚ್ ಹೋತಾ ಹೈ ಸಿನಿಮಾ ಸಿನಿ ಪ್ರೇಕ್ಷಕರ ಫೇವರೆಟ್ ಲಿಸ್ಟ್ನಲ್ಲಿ ಒಂದಾಗಿದೆ. ಭಾರತೀಯರು ಸೇರಿದಂತೆ ವಿದೇಶಿಗರಿಗೂ ಸಹ ಈ ಒಂದು ಸಿನಿಮಾದ ಹಾಡು ಪ್ರಸಿದ್ದತೆಯನ್ನು ಪಡೆದುಕೊಂಡಿವೆ. ಆ ಸಿನಿಮಾದ ಹಾಡು ಇದೀಗ ರಾಷ್ಟ್ರಪತಿಗಳ ಭವನದಲ್ಲಿ ಕೇಳಿಸಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಗಣರಾಜ್ಯೋತ್ಸವದ ಅತಿಥಿಗಳಿಗೆ ಬ್ಯಾಂಕ್ವೆಟ್ ಹಾಲ್ನಲ್ಲಿಔತಣ ಕೂಟ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಒಂದು ಔತಣಕೂಟದಲ್ಲಿ ಇಂಡೋನೇಷ್ಯಾ ನಿಯೋಗದ ಸದಸ್ಯರಿಗೆ ಹಿಂದಿ ಹಾಡನ್ನ ಹಾಕಲಾಗಿದೆ. ಕುಚ್ ಕುಚ್ ಹೋತಾ ಹೈ ಸಿನಿಮಾದ ಹಾಡು ಕೇಳಿ ಅಧಿಕಾರಿಗಳು ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.