
ಪ್ರಸ್ತುತ್ತ ನಡೆಯುತ್ತಿರುವ ಇಂಗ್ಲೆಂಡ್ vs ಭಾರತ ಸರಣಿಯಿಂದ ಆರ್ಸಿಬಿ ತಂಡಕ್ಕೆ ಹೊಸ ತಲೆನೋವು ಎದುರಾಗಿದೆ. 2025ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್ಸ್ಟೋನ್ ಫಿಲ್ ಸಾಲ್ಟ್, ಜೆಕಬ್ ಬೆಥೆಲ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿತ್ತು. ಆದರೆ ಸದ್ಯಕ್ಕೆ ನಡೆಯುತ್ತಿರುವ ಸರಣಿಯಲ್ಲಿ ಈ ಮೂವರ ಬ್ಯಾಟ್ಗಳು ಸದ್ದು ಮಾಡ್ತಾ ಇಲ್ಲ.ಮೊದಲ ಪಂದ್ಯದಲ್ಲಿ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಶೂನ್ಯಕ್ಕೆ ಔಟ್ ಆದರೆ, ಜೆಕೆಬ್ ಬೆಥೆಲ್ ರನ್ ಗಳಿಸುವುದಕ್ಕೆ ಪರದಾಡುತ್ತಿದ್ದರು. 2ನೇ ಟಿ20 ಪಂದ್ಯದಲ್ಲೂ ಸಹ ಫಿಲ್ ಸಾಲ್ಟ್ ಹಾಗೂ ಲಿವಿಂಗ್ಸ್ಟೋನ್ ಬಹು ಬೇಗನೇ ಔಟ್ ಆಗಿದ್ದರು. ಜೆಕಬ್ ಬೆಥೆಲ್ ಅನಾರೋಗ್ಯದಿಂದ ಪಂದ್ಯದಿಂದ ಹೊರಗುಳಿದಿದ್ದರು. ಈ ಮೂವರ ಪ್ರದರ್ಶನದಿಂದ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಸೀಸನ್ ಆರಂಭಕ್ಕೂ ಮೊದಲೇ ಟೆನ್ಷನ್ ಎದುರಾಗಿದೆ..
