
ವಿಚ್ಚೇದನಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದ ಯುಜುವೇಂದ್ರ ಚಹಲ್ ಇದೀಗ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ..ಮುಂದಿನ ಐಪಿಎಲ್ ಸೀಸನ್ಗೆ ಚಹಾಲ್ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಬರೋಬರಿ 18 ಕೋಟಿ ನೀಡಿ ಚಹಲ್ರನ್ನು ಖರೀದಿ ಮಾಡಿತ್ತು. ಟೂರ್ನಿಯ ಇತಿಹಾಸದಲ್ಲೇ ಚಹಲ್ ಅತ್ಯಂತ ಯಶಸ್ವಿ ಸ್ಪಿನ್ನರ್ ಎನ್ನಿಸಿಕೊಂಡಿದ್ದಾರೆ. ಟೂರ್ನಿ ಶುರುವಾಗಲು ಇನ್ನೂ 2 ತಿಂಗಳು ಇದ್ದು ಪಂಜಾಬ್ ಪೂರ್ವ ತಯಾರಿ ಶಿಬಿರವನ್ನು ಹಮ್ಮಿಕೊಂಡಿತ್ತು. ಶಿಬಿರದಲ್ಲಿ ಭಾಗಿಯಾಗಿ ಹಲವು ಗಂಟೆಗಳ ಕಾಲ ಚಹಲ್ ನೆಟ್ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. 2025ರ ಪಂಜಾಬ್ ಕಿಂಗ್ಸ್ ತಂಡ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ.
