
ಬಿಗ್ ಬ್ಯಾಷ್ ಲೀಗ್ನ ಫೈನಾಲ್ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ತಂಡ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಡೇವಿಡ್ ವಾರ್ನರ್ ನೇತೃತ್ಬದ ಸಿಡ್ನಿ ಥಂಡರ್ ವಿರುದ್ದ ಗೆದ್ದು 7 ಪ್ರಶಸ್ತಿ ಬರವನ್ನ ನೀಗಿಸಿಕೊಂಡಿತ್ತು. ಟೂರ್ನಿಯ ಆರಂಭದಲೇ ಹರಿಕೇನ್ಸ್ ತಂಡ ಸ್ಥಿರ ಪ್ರದರ್ಶನವನ್ನ ನೀಡುತ್ತಾ ಬಂದಿತ್ತು. ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳ ಪೈಕಿ 7 ರಲ್ಲಿ ಗೆದ್ದು ಕೇವಲ 2ರಲ್ಲಿ ಸೋತು ಟೇಬಲ್ ಟಾಪರ್ ಆಗಿ ಕ್ವಾಲಿಫೈಯರ್ಗೆ ಎಂಟ್ರಿ ನೀಡಿತ್ತು. ಕ್ವಾಲಿಪೈಯರ್ನಲ್ಲೂ ಸಿಡ್ನಿ ಥಂಡರ್ ವಿರುದ್ದ ಜಯ ಗಳಿಸಿ ಫೈನಾಲ್ ಪ್ರವೇಶಿಸಿತ್ತು. ಈಗ ಫೈನಾಲ್ನಲ್ಲೂ ಸಿಡ್ನಿ ಥಂಡರ್ ಮಣಿಸಿ ಚಾಂಪಿಯನ್ ಆಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಹರಿಕೇನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಸಿಡ್ನಿ ಥಂಡರ್ 20 ಓವವರ್ಗಳಿಗೆ 182 ರನ್ ಗಳಿಸಿತ್ತು. ಜೇಸನ್ ಸಂಘ 67 ರನ್, ಡೇವಿಡ್ ವಾರ್ನರ್ 48 ರನ್ ಬಿಟ್ಟರೆ ಉಳಿದ ಬ್ಯಾಟರ್ಗಳಿಂದ ಯಾವುದೇ ನಿರೀಕ್ಷಿತ ಪ್ರದರ್ಶನ ಬರದೇ ಇರುವ ಕಾರಣ ತಂಡ 200 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ. ನಂತರ ಗುರಿ ಬೆನ್ನತ್ತಿದ್ದ ಹರಿಕೇನ್ಸ್ಗೆ ಸ್ಪೋಟಕ ಆರಂಭ ಲಭಿಸಿತ್ತು. ಓಪನರ್ ಮಿಚಲ್ ಓವನ್ ಸಿಡಿಲಬ್ಬರದ ಶತಕ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 98 ರನ್ ಗಳಿಸಿತ್ತು. ಅಂತಿಮವಾಗಿ ತಂಡ 14.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು.
