
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದ ನೂತನ ಅಧ್ಯಕ್ಷ ಡೋನಾಲ್ಟ್ ಟ್ರಂಪ್ಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಭಾರತ ಅಮೆರಿಕಾ ರಾಷ್ಟ್ರಗಳ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಟ್ರಂಪ್-ಮೋದಿ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಟ್ ಟ್ರಂಪ್ ಅವರು ನನ್ನ ಆತ್ಮೀಯ ಸ್ನೇಹಿತ ಎಂದು ಬಣ್ಣಿಸಿದ್ದು ಭಾರತ ಹಾಗೂ ಅಮರಿಕಾ ಜಂಟಿಯಾಗಿ ಜಾಗತಿಕ ಶಾಂತಿ, ಸಮೃದ್ದಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಟ್ರಂಪ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ವಿವಿಧ ಕಾರಣದಿಂದ ಮೋದಿ ಗೈರಾಗಿದ್ದರು. ಆ ವೇಳೆ ವಿದೇಶಾಂಗ ಸಚಿವ ಎಸ್ ಜೈ ಶಂಕರ್ರವರು ಭಾರತದ ಪರವಾಗಿ ಟ್ರಂಪ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿದ್ದರು ಜೊತಗೆ ಟ್ರಂಪ್ಗಾಗಿ ಮೋದಿ ಬರೆದಿದ್ದ ಪತ್ರವನ್ನೂ ಸಹ ಕೊಂಡೊಯ್ಯಿದಿದ್ದರು.
