
ಪ್ರೊ ಕಬ್ಬಡಿ ಸೀಸನ್ 6ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ಕೋಚ್ ಹುದ್ದೆಗೆ ರಣಧೀರ್ ಸಿಂಗ್ ಗುಡ್ ಬೈ ಹೇಳಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಕೋಚಿಂಗ್ ಅಡಿಯಲ್ಲಿ ಬೆಂಗಳೂರು ಬುಲ್ಸ್ ಸೀಸನ್ 6ರಲ್ಲಿ ಚಾಂಪಿಯನ್ ಕೂಡ ಆಗಿತ್ತು. ಆದರೆ ಇತ್ತೀಚೆಗೆ ಮುಗಿದ ಪ್ರೋ ಕಬ್ಬಡಿ ಸೀಸನ್ 11ರಲ್ಲಿ ಬುಲ್ಸ್ ತಂಡ ಟೂರ್ನಿಯ ಇತಿಹಾಸದಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆಡಿದ 22 ಪಂದ್ಯಗಳಿಂದ ಕೇವಲ ಎರಡರಲ್ಲಿ ಗೆದ್ದು 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿತ್ತು. ಬುಲ್ಸ್ ನೀರಸ ಪ್ರದರ್ಶನಕ್ಕೆ ಕೋಚ್ ಕಾರಣವೆಂದು ಕೂಡಲೇ ಕೋಚ್ ಬದಲಾಯಿಸಿಬೇಕೆಂಬ ಮಾತು ಅಭಿಮಾನಿಗಳಲ್ಲಿ ಕೇಳಿಬರುತಿತ್ತು. ಅಂತಿಮವಾಗಿ ಫ್ರಾಂಚೈಸಿ ಇದೀಗ ರಣಧೀರ್ಗೆ ಕೋಚ್ ಸ್ಥಾನದಿಂದ ಕೊಕ್ ನೀಡಿದ್ದು 11 ಸೀಸನ್ಗಳ ನಿರಂತರ ಪ್ರಯಾಣಕ್ಕೆ ಫುಲ್ ಸ್ಟಾಪ್ ಇಡಲಾಗಿದೆ.
