
2025ರ ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಪ್ರಶಸ್ತಿಗಾಗಿ 10 ತಂಡಗಳು ಕಾದಾಟ ನಡೆಸಲಿವೆ. ಈ ಬಾರಿ ಪ್ರಶಸ್ತಿ ಮೇಲೆ ಕಣ್ಣೀಟ್ಟಿರುವ ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಆರಂಭಿಕ ಸ್ಥಾನಕ್ಕೆ ಇವರೇ ಸೂಕ್ತ ಎಂದು ಪೈಪೋಟಿಗೆ ಬಿದ್ದು ಕೋಟಿ ಕೋಟಿ ನೀಡಿ ಖರೀದಿ ಮಾಡಿದ ಆಟಗಾರನೇ ಇದೀಗ ಆರ್ಸಿಬಿ ತಲೆನೋವಿಗೆ ಕಾರಣವಾಗಿದೆ. ಆ ಆಟಗಾರ ಬೇರೆ ಯಾರು ಅಲ್ಲ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸಮನ್ ಫಿಲ್ ಸಾಲ್ಟ್. ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡ ಟ್ರೋಫಿ ಗೆಲ್ಲುವಲ್ಲಿ ಸಾಲ್ಟ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರದರ್ಶನ ನೋಡಿ ಆರ್ಸಿಬಿ ಫಾಂಚೈಸಿ ಈ ಬಾರಿ ಐಪಿಎಲ್ ಆಟಗಾರರ ಹರಾಜಿನಲ್ಲಿ ಖರೀದಿ ಮಾಡಿತ್ತು. ಪ್ರಸ್ತುತ ಇಂಗ್ಲೆಂಡ್ ಹಾಗೂ ಭಾರತ ಟಿ 20 ಸರಣಿ ನಡೆಯುತ್ತಿದ್ದು ಸಾಲ್ಟ್ ಅವರ ಬ್ಯಾಟಿಂಗ್ ತೀರಾ ಕಳಪೆಯಾಗಿದೆ. ಆಡಿದ 3 ಟಿ-20 ಪಂದ್ಯಗಳಿಂದ ಒಂದೇ ಒಂದು ಅರ್ಧ ಶತಕ ಬಂದಿಲ್ಲ.ಅದರಲ್ಲೂ ಇನ್ನಿಂಗ್ಸ್ ಮೊದಲ ಓವರ್ ನಲ್ಲಿ ಸಾಲ್ಟ್ ವಿಕೆಟ್ ಒಪ್ಪಿಸುತ್ತಿರುವುದು ತಂಡದ ಇತರ ಬ್ಯಾಟರ್ಗಳ ಮೇಲೆ ಒತ್ತಡ ಬೀರುತ್ತಿದೆ. ಈ ಒಂದು ಚಿಂತೆ ಆರ್ಸಿಬಿ ಟೀಂಗೂ ಕಾಡುತ್ತಿದ್ದು ಆದಷ್ಟು ಬೇಗ ಸಾಲ್ಟ್ ತಮ್ಮ ನೈಜ ಫಾರ್ಮ್ಗೆ ಮರಳಲಿ ಎಂದು ಆರ್ಸಿಬಿ ಹಾಗೂ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

ಅಭಿಷೇಕ್