
13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ ಪಂದ್ಯ ಆಡುತ್ತಿರುವ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ಡೆಲ್ಲಿ ತಂಡದ ಪರ ಆಡಿದ ಅವರು ಕೇವಲ 6 ರನ್ ಗಳಿಗೆ ಸುಸ್ತಾಗಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ರೈಲ್ವೇಸ್ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಕೊಹ್ಲಿ ಆಟವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸ್ಟೇಡಿಯಂನತ್ತ ಜಮಾಯಿಸಿದ್ದರು. ಮೊದಲ ದಿನದಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರತೆ ಎರಡನೇ ದಿನ ಕೊಹ್ಲಿ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಇಳಿದರು. ಒಟ್ಟು 15 ಎಸೆತಗಳನ್ನು ಎದುರಿಸಿದ ಕೊಹ್ಲಿ 1 ಬೌಂಡರಿ ಸಹಿತ ಒಟ್ಟು 6 ರನ್ ಗಳಿಸಿ ಹಿಮಾಂಶು ಸಂಗ್ವಾನ್ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟ್ ಆಗುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಜಾಗ ಖಾಲಿ ಮಾಡಿದರು. ಸದ್ಯಕ್ಕೆ ಡೆಲ್ಲಿ ತಂಡ 7 ವಿಕೆಟ್ ಕಳೆದುಕೊಂಡು 334 ರನ್ ಗಳಿಸಿ ಒಟ್ಟು 93 ರನ್ಗಳ ಲೀಡ್ ಪಡೆದುಕೊಂಡಿದೆ..
