
ಇದೇ ತಿಂಗಳು ಆರಂಭವಾಗುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತನ್ನ 15 ಸದಸ್ಯರ ತಂಡವನ್ನಪ್ರಕಟಿಸಿದೆ. ನಾಯಕ ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ತಂಡದಲ್ಲಿ ಕೆಲವು ಹಿರಿಯ ಆಟಗಾರರಿಗೂ ಅವಕಾಶ ನೀಡಲಾಗಿದೆ. ಆ ಮೂಲಕ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳು ತಮ್ಮ ತಂಡಗಳನ್ನ ಪ್ರಕಟಿಸಿವೆ. ಈ ಮೊದಲು ಐಸಿಸಿ ನಿಗದಿಪಡಿಸಿದ್ದ ದಿನಾಂಕದೊಳಗೆ 6 ತಂಡಗಳು ತಮ್ಮ ತಂಡವನ್ನ ಪ್ರಕಟಿಸಿದವು ಆದರೆ ಭಾರತ ಹಾಗೂ ಪಾಕಿಸ್ತಾನ ಮಾತ್ರ ಇನ್ನೂ ತಂಡವನ್ನ ಹೆಸರಿಸಿರಲಿಲ್ಲ. ಮೊದಲು ಭಾರತ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವನ್ನ ಪ್ರಕಟಿಸಿತ್ತು. ಆದಾದ ನಂತರ ಪಾಕಿಸ್ತಾನ ತಂಡ ತನ್ನ ತಂಡವನ್ನ ಹೆಸರಿಸಿದೆ.

ಪಾಕಿಸ್ತಾನ ತಂಡ
ಬಾಬರ್ ಆಝಂ, ಫಖರ್ ಜಮಾನ್, ಕಮ್ರಾನ್ ಗುಲಾಮ್, ತಾಹಿರ್,ಸೌದ್ ಶಕೀಲ್,ಫಹೀಮ್ ಅಶ್ರಫ್,ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ,ಮೊಹಮ್ಮದ್ ರಿಜ್ವಾನ್,ಉಸ್ಮಾನ್ ಖಾನ್,ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, , ಮೊಹಮ್ಮದ್ ಹಸ್ನೈನ್

ಒಂದೇ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡ ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಇದರ ಜೊತೆಗೆ ನ್ಯೂಜೆಲೆಂಡ್, ಬಾಂಗ್ಲಾದೇಶ ತಂಡ ಕೂಡ ಇದೇ ತಂಡದಲ್ಲಿವೆ. ಫೆಬ್ರವರಿ 19ರಂದು ನ್ಯೂಜೆಲೆಂಡ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಫ್ರೆಬವರಿ 23ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.