
ಇಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಈಗಾಗಲೇ ಹಲವುಬ ಪ್ರಶಸ್ತಿಗಳು ಸಚಿನ್ ತೆಂಡೂಲ್ಕರ್ಗೆ ಒಲಿದು ಬಂದಿದೆ. ಇದೀಗ ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ಸಚಿನ್ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ.

ಕಳೆದ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ಫಾರೂಕ್ ಇಂಜಿನಿಯರ್ ಕರ್ನಲ್ ಸಿಕೆ ನಾಯುಡು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತ ಪರ ಸಚಿನ್ 1 ಟಿ-20 ಪಂದ್ಯ, 200 ಟೆಸ್ಟ್ ಪಂದ್ಯ 463 ಏಕದಿನ ಪಂದ್ಯ ಸೇರಿ ಒಟ್ಟು 664 ಅಂತರಾಷ್ಟೀಯ ಪಂದ್ಯ ಆಡಿದ್ದಾರೆ. ಟೆಸ್ಟ್ನಲ್ಲಿ 15921 ರನ್, ಏಕದಿನದಲ್ಲಿ 18426 ರನ್ ಗಳಿಸಿದ್ದು ಅಲ್ಲದೇ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿದ ದಾಖಲೆ ಕೂಡ ಸಚಿನ್ ಅವರ ಹೆಸರಿನಲ್ಲಿದೆ.
