
ಅಂಡರ್ 19 ಟಿ-20 ವಿಶ್ವಕಪ್ ಮಹಿಳೆಯರ ಫೈನಲ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಭಾರತಕ್ಕೆ ಎದುರಾಗಿದ್ದ ದಕ್ಷಿಣ ಆಫ್ರಿಕಾ ತಂಡವನ್ನ ಸುಲಭವಾಗಿ ಮಣಿಸಿತ್ತು. ಮೊದಲು ಟಾಸ್ ಗೆದ್ದು ಬ್ಯಾಟಿಮಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 82 ರನ್ಗಳಿಗೆ ಅಲೌಟ್ ಆಯಿತ್ತು. ಮೈಕ್ ವ್ಯಾನ್ ವೂರ್ಸ್ಟ್ (23),ಗೆಮ್ಮಾಬೋಥಾ (16), ಫೇ ಕೌಲಿಂಗ್ (15) ತಂಡಕ್ಕೆ ತಮ್ಮ ಕೊಡುಗೆ ನೀಡಿದರು. ಭಾರತ ಪರ ಬೌಲಿಂಗ್ನಲ್ಲಿ ಮಿಂಚಿದ ಗೊಂಗಡಿ ತ್ರಿಶಾ 15 ರನ್ ನೀಡಿ 3 ವಿಕೆಟ್ ಪಡೆದರು.

ಇವರ ಜೊತೆಗೆ ವೈಷ್ಣವಿ ಶರ್ಮಾ,ಆಯುಷಿ ಶುಕ್ಲಾ,ಪರುಣಿಕಾ ಸಿಸೋಡಿಯಾ ತಲಾ 2 ವಿಕೆಟ್ ಪಡೆದರೆ,ಶಬ್ನಮ್ ಶಕೀಲ್ 1 ವಿಕೆಟ್ ಪಡೆದರು. 83 ರನ್ಗಳ ಸುಲಭ ಗುರಿ ಪಡೆದ ಟೀ ಇಂಡಿಯಾಗೆ ಆರಂಭಿಕರಾದ ಗೊಂಗಡಿ ತ್ರಿಶಾ, ಕಮಲಿನಿ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 36 ರನ್ ಗಳಿಸಿದರು. ನಂತರ ಬಂದ ಬ್ಯಾಟ್ಸ್ಮನ್ಗಳು ತಂಡವನ್ನು ಗೆಲ್ಲುವಿನ ದಡಕ್ಕೆ ಸೇರಿಸಿದರು. ಆ ಮೂಲಕ ಸತತ ಎರಡನೇ ಬಾರಿಗೆ ಟೀಂ ಇಂಡಿಯಾದ ವನಿತೆಯರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಹಿಂದೆ 2024ರಲ್ಲಿ ಪುರಷರ ಭಾರತ ತಂಡ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು..
