
2025ರ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಒಂದು ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಇದಾಗಲೇ ಸೀಸನ್ 18ರ ಆರಂಭಿಕ ಪಂದ್ಯ ಮಾರ್ಚ್ 21 ರಂದು ಕಲ್ಕತ್ತಾದಲ್ಲಿ ಜರುಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಉದ್ಘಾಟನಾ ಪಂದ್ಯದಲ್ಲಿ ಯಾವ ತಂಡಗಳು ಸೆಣಸಾಡಲಿವೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಾರಿ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಟೂರ್ನಿಯ ಆರಂಭಿಕ ಹಾಗೂ ಫೈನಲ್ ಪಂದ್ಯ ಕಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಿಗದಿಯಾಗಲಿದೆ. ಕಳೆದ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡ ಹೈದ್ರಾಬಾದ್ ತಂಡವನ್ನ ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿತ್ತು.ಈ ಆವೃತ್ತಿಯಲ್ಲೂ ಬಹುತೇಕವಾಗಿ ಕೆಕೆಆರ್ ತಂಡ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಈ ಬಾರಿ ಟೂರ್ನಿಗೆ ಮೆಗಾ ಹರಾಜು ನಡೆಸಲಾಗಿದ್ದು ಎಲ್ಲಾ 10 ಫ್ರಾಂಚೈಸಿಗಳು ತಮ್ಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿವೆ. ಕೆಲವು ಆಟಗಾರರು ಹರಾಜಿನಲ್ಲಿ ಸೇಲ್ ಆಗದೇ ಉಳಿದರೆ,ಇನ್ನೂ ಕೆಲವು ಆಟಗಾರರು ಗರಿಷ್ಠ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಐಪಿಎಲ್ 18ರ ಸೀಸನ್ಗಾಗಿ ಕೆಲವು ತಂಡಗಳು ಇದಾಗಲೇ ತಮ್ಮ ನಾಯಕನನ್ನು ಅನೌನ್ಸ್ ಮಾಡಿದ್ದರೆ,ಇನ್ನೂ ಕೆಲವು ತಂಡಗಳು ನಾಯಕನ ಹುಡುಕಾಟದಲ್ಲಿವೆ ಆ ಪೈಕಿ ಆರ್ಸಿಬಿ ತಂಡವು ಒಂದಾಗಿದೆ.
ಅಭಿಷೇಕ್ ಎಸ್