
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತು ಕ್ರಿಕೆಟ್ ಫೀಲ್ಡ್ನಲ್ಲಿ ಕೇಳಿಬರುತ್ತಿದೆ. 2027ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಯುವ ತಂಡ ಕಟ್ಟುವ ನಿಟ್ಟಿನಲ್ಲಿ ರೋಹಿತ್ ಶರ್ಮಾಗೆ ನಿವೃತ್ತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.ಯಾಕೆಂದರೆ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಯಾಗಲಿದೆ ಎಂಬ ಸುಳಿವು ಇದಾಗಲೇ ಬಿಸಿಸಿಐ ನೀಡಿದೆ.

ಆ ಭಾಗವಾಗಿ ಶರ್ಮಾಗೆ ನಿವೃತ್ತಿ ವಿಚಾರವಾಗಿ ಒಂದು ದೃಢವಾದ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಸಹ ಮಾಡಿದೆಯಂತೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಅಲ್ಲದೇ 37 ವರ್ಷದ ಶರ್ಮಾ ಮುಂಬರುವ ವಿಶ್ವಕಪ್ ಆಡಬೇಕೆಂದರೆ ಆಗ ಅವರಿಗೆ 39 ವರ್ಷ ಆಗಲಿದೆ. ಆ ವೇಳೆ ಅವರ ಫಿಟ್ನೆಸ್,ಫಾರ್ಮ್ ಮೇಲೂ ಗಮನ ಹರಿಸಬೇಕಾಗುತ್ತೆ. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರೆ ಒಂದು ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ಹಾಗಾಗೀ ಚಾಂಪಿಯನ್ಸ್ ಟ್ರೋಫಿ ರೋಹಿತ್ ಶರ್ಮಾ ಪಾಲಿಗೆ ಅತ್ಯಂತ ಮಹತ್ವದ ಸರಣಿಯಾಗಿರಲಿದೆ.
ಅಭಿಷೇಕ್ . ಎಸ್