
ಭಾರತ ತಂಡದ ನಾಯಕ ರೋಹಿತ್ ಶರ್ಮಾರ ಫಾರ್ಮ್ ಸಮಸ್ಯೆ ಮುಂದುವರೆದಿದ್ದು , ಇಂಗ್ಲೆಂಡ್ ವಿರುದ್ದವೂ ಹಿಟ್ ಮ್ಯಾನ್ ಆಟ ನಡೆಯಲಿಲ್ಲ. ಕಳೆದ ದಿನ ನಡೆದ ಪಂದ್ಯದಲ್ಲಿ ಭಾರತ ಮೊದಲು ಬೌಲಿಂಗ್ ಮಾಡಿ ಎದುರಾಳಿ ತಂಡವನ್ನ248 ರನ್ಗಳಿಗೆ ಅಲೌಟ್ ಮಾಡಿತ್ತು. ಬಳಿಕ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಬಂದ ರೋಹಿತ್ ಶರ್ಮಾ ಮತ್ತೆ ನಿರಾಸೆ ಅನುಭವಿಸಿದರು.

ಯಶಸ್ವಿ ಜೈಸ್ವಾಲ್ ಔಟ್ ಆಗುತ್ತಿದ್ದಂತೆ ನಾಯಕ ರೋಹಿತ್ ಕೂಡ ಔಟ್ ಆಗಿ ತಮ್ಮ ಅಭಿಮಾನಿಗಳಿಗೆ ಬೇಸರ ಮೂಡಿಸಿದರು. ರೋಹಿತ್ ಕಳೆದ 16 ಇನ್ನಿಂಗ್ಸ್ನಲ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲೂ ರೋಹಿತ್ ಕಳಪೆ ಬ್ಯಾಟಿಂಗ್ ನಡೆಸಿದ್ದರು. ಇದೀಗ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲೂ ಅವರ ಫಾರ್ಮ್ ಸಮಸ್ಯೆ ಮುಂದುವರೆದಿದೆ. ಎದುರಿಸಿದ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ನಿರಾಸೆಯಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ರೋಹಿತ್ ಕಳಪೆ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ಚಿಂತೇಗೀಡು ಮಾಡಿದೆ. ಇನ್ನೊಂದು ಕಡೆ ಹಿಟ್ ಮ್ಯಾನ್ ಫಾನ್ಸ್ ಮಾತ್ರ ರೋಹಿತ್ ತಮ್ಮ ನೈಜ ಆಟಕ್ಕೆ ಬೇಗನೇ ವಾಪಸ್ ಆಗಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಅಭಿಷೇಕ್ . ಎಸ್