
ಆಸ್ಟ್ರೇಲಿಯಾ ತಂಡದ ಅಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 35 ವರ್ಷದ ಆಸೀಸ್ ಆಟಗಾರ 71 ಏಕದಿನ ಪಂದ್ಯಗಳನ್ನು ಆಡಿ ಒಟ್ಟು 1245 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, ಆರು ಅರ್ಧ ಶತಕವಿದೆ. ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ಆಲ್ರೌಂಡರ್ ಆಗಿದ್ದರು. ಹಲವು ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಕೇವಲ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೇ ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದರು. 71 ಪಂದ್ಯಗಳಿಂದ 48 ವಿಕೆಟ್ ಪಡೆದು ತಂಡಕ್ಕೆ ನೆರವಾಗಿದ್ದರು.
ಸದ್ಯ ಇದೇ ತಿಂಗಳ 19ನೇ ತಾರೀಖಿನಂದು ನಡೆಯಲಿದ್ದ ಚಾಂಪಿಯನ್ಸ್ ಟ್ರೋಫಿಗೆ ಮಾರ್ಕಸ್ ಸ್ಟೋಯ್ನಿಸ್ ತಂಡದಲ್ಲಿದ್ದರು. ಇದಾಗಲೇ ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ನಡೆದಿದ್ದಾರೆ. ಈಗ ಸ್ಟೋಯ್ನಿಸ್ ಏಕಾಏಕಿ ನಿವೃತ್ತಿ ಹೇಳಿರುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ

ಅಭಿಷೇಕ್ . ಎಸ್