
ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯಕ್ಕೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಭ್ಯರಾಗಲಿದ್ದಾರೆ. ನಾಗ್ಪುರ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮೊಣ ಕಾಲಿನ ಸಮಸ್ಯೆ ಒಳಗಾಗಿ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಆಡಿದ್ದರು. ಇದೀಗ ಕಿಂಗ್ ಕೊಹ್ಲಿ ಫಿಟ್ ಆಗಿದ್ದು ನಾಳೆಯ ಪಂದ್ಯವನ್ನು ಆಡಲಿದ್ದಾರೆ. ಅವರಿಗೆ ಯಶಸ್ವಿ ಜೈಸ್ವಾಲ್ ಸ್ಥಾನವನ್ನು ಬಿಟ್ಟು ಕೊಡಬೇಕಾಗಿದೆ.

ಒತ್ತಡದಲ್ಲಿ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ದ ನಡೆದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸದ ಕೊಹ್ಲಿಗೆ ಈ ಸರಣಿ ಅತ್ಯಂತ ಮಹತ್ವದಾಗಿದೆ. ಫೆಬ್ರವರಿ 19ರಿಂದ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು ಅದಕ್ಕೆ ಮುನ್ನ ಈ ಸರಣಿ ಕಿಂಗ್ ಕೊಹ್ಲಿಗೆ ಮುಖ್ಯವಾಗಿರಲಿದೆ.
ಅಭಿಷೇಕ್ . ಎಸ್