
ಫೆಬ್ರವರಿ 19ರಿಂದ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ್ ತಂಡ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ತಂಡದ ಸದಸ್ಯರು ಭಾಗಿಯಾಗಿ ನೂತನ ಜೆರ್ಸಿ ಅನಾವರಣಗೊಳಿಸಿದ್ದಾರೆ. ಜೆರ್ಸಿ ಬಿಡುಗಡೆ ಜೊತೆಗೆ ಗದ್ದಾಫಿ ಸ್ಟೇಡಿಯಂ ಕೂಡ ಉದ್ಘಾಟನೆಗೊಂಡಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಗದ್ದಾಫಿ ಸ್ಟೇಡಿಯಂನ್ನು ತಯಾರಿ ಮಾಡಲಾಗಿತ್ತು.

ಪಾಕಿಸ್ತಾನದ ಬಹುತೇಕ ಪಂದ್ಯಗಳು ಈ ಒಂದು ಸ್ಟೇಡಿಯಂನಲ್ಲೇ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ. ಫೆಬ್ರವರಿ 23ರಂದು ಭಾರತ ಹಾಗೂ ಪಾಕಿಸ್ತಾ ತಂಡಗಳು ಮುಖಾಮುಖಿಯಾಗಲಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ.

ಅಭಿಷೇಕ್ . ಎಸ್