
ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 59 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಡಿದ್ದರು. ಅಸಲಿಗೆ ಶ್ರೇಯಸ್ ಅಯ್ಯರ್ ಅಂದಿನ ಪಂದ್ಯ ಆಡುತ್ತಾರೆ ಎಂದು ಊಹಿಸಿರಲಿಲ್ಲವಂತೆ, ಮ್ಯಾಚ್ ಹಿಂದಿನ ದಿನ ಶ್ರೇಯಸ್ ಅಯ್ಯರ್ ಮೊಬೈಲ್ನಲ್ಲಿ ಸಿನಿಮಾ ನೋಡುತ್ತಿದ್ದರಂತೆ. ಸಡನ್ ಆಗಿ ನಾಯಕ ರೋಹಿತ್ ಶರ್ಮಾ ಪೋನ್ ಮಾಡಿ ಕೊಹ್ಲಿ ಇಂಜುಂರಿ ಬಗ್ಗೆ ಹೇಧಳಿ ನಾಳೆಯ ಮ್ಯಾಚ್ನಲ್ಲಿ ನೀನು ಆಡುವ ಸಾಧ್ಯತೆಯಿದೆ ಎಂದು ಹೇಳಿದ್ದರಂತೆ.ತಕ್ಷಣ ನಾನು ಸಿನಿಮಾ ನೋಡದನ್ನ ನಿಲ್ಲಿಸಿ ನೇವಾಗಿ ರೂಂಗೆ ತೆರಳಿ ನಿದ್ರೆ ಮಾಡಿದ್ದೆ ಎಂದು ಇಂಗ್ಲೆಂಡ್ ವಿರುದ್ದ ನಡೆದ ಮೊದಲ ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಪಂದ್ಯಕ್ಕೆ ಆಯ್ಕೆಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 4 ವಿಕೆಟ್ಗಳ ಜಯ ಸಾಧಿಸಿದೆ. ಎರಡನೇ ಏಕದಿನ ಪಂದ್ಯ ಕಟಕ್ನಲ್ಲಿ ನಡೆಯಲಿದೆ.

ಅಭಿಷೇಕ್ . ಎಸ್