
ಫೆಬ್ರವರಿ 19ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು 8 ತಂಡಗಳು ಈ ಒಂದು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದಶಕಗಳ ಇತಿಹಾಸವಿದೆ. ಕೆಲ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ ಇನ್ನೂ ಕೆಲ ತಂಡಗಳು ಚೊಚ್ಚಲ ಬಾರಿ ಚಾಂಪಿಯನ್ ಆಗಲು ಎದುರು ನೋಡುತ್ತಿವೆ. ಮಿನಿ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಈ ಟೂರ್ನಿ ಚಾಂಪಿಯನ್ಗಳ ಪಟ್ಟಿ ಇಲ್ಲಿದೆ …
1998- ದಕ್ಷಿಣ ಆಫ್ರಿಕಾ
2000 – ನ್ಯೂಜಿಲೆಂಡ್
2002 – ಭಾರತ-ಲಂಕಾ
2004 – ವೆಸ್ಟ್ ಇಂಡೀಸ್
2006 – ಆಸ್ಟ್ರೇಲಿಯಾ
2009 – ಆಸ್ಟ್ರೇಲಿಯಾ
2013 – ಭಾರತ
2017 – ಪಾಕಿಸ್ತಾನ

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಲಾ 2 ಬಾರಿ ಟ್ರೋಫಿಯನ್ನು ಗೆದ್ದಿವೆ. ಒಟ್ಟು 7 ತಂಡಗಳು ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿವೆ. 2013ರಲ್ಲಿ ಎಂ ಎಸ್ ಧೋನಿಯವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ದ ಜಯ ಗಳಿಸಿ ಚಾಂಪಿಯನ್ ಆಗಿತ್ತು. 2017ರಲ್ಲಿ ಮತ್ತೆ ಭಾರತ ಪೈನಲ್ ಪ್ರವೇಶಿಸಿದಾದರೂ ಪಾಕಿಸ್ತಾನ ವಿರುದ್ದ ಸೋತಿತ್ತು.
ಅಭಿಷೇಕ್ ಎಸ್