
ಐಪಿಎಲ್ 2025ರ ಟೂರ್ನಿ ಮಾರ್ಚ್ 22ರಂದು ಶುರುವಾಗಲಿದೆ. ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ Vs ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿ ಆರಂಭಕ್ಕೆ ಇನ್ನೂ 1 ತಿಂಗಳು ಇದ್ದರೂ ಸಹ ಕೆಕೆಆರ್ ಈಗಾಗಲೇ ತನ್ನ ಮೈಂಡ್ಗೇಮ್ ಶುರು ಮಾಡಿದೆ.

ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ 49 ನೆನಪಿದಿಯ್ಯಾ ಎಂದು ಆರ್ಸಿಬಿ ಕಾಲೆಳೆಯುವ ಪ್ರಯತ್ನ ಮಾಡಿದೆ. 2017ರಲ್ಲಿ ಕೆಕೆಆರ್ ಆರ್ಸಿಬಿ ನಡುವಿನ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಕೆಕೆಆರ್ 130 ರನ್ ಕಲೆಹಾಕಿತ್ತು. ನಂತರ ಗುರಿ ಬೆನ್ನತ್ತಿದ್ದ ಆರ್ಸಿಬಿ ಕೇವಲ 49 ರನ್ಗಳಿಗೆ ಅಲೌಟ್ ಆಯಿತ್ತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಕಡಿಮೆ ಮೊತ್ತಕ್ಕೆ ಅಲೌಟ್ ಆದ ದಾಖಲೆ ಬರೆಯಿತ್ತು. ಈಗ ಅದನ್ನೇ ಮತ್ತೆ ಕೆಕೆಆರ್ ಆರ್ಸಿಬಿಗೆ 49 ನೆನಪಿದಿಯ್ಯಾ ಎಂದು ಕುಟುಕಿದೆ. ಕೆಕೆಆರ್ ಕೌಂಟರ್ಗೆ ಆರ್ಸಿಬಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಒಂದು ವೇಳೆ ಮಾರ್ಚ್ 22ರಂದು ಕೆಕೆಆರ್ ವಿರುದ್ದ ಆರ್ಸಿಬಿ ಗೆದ್ದರೆ ಆಗ ಆರ್ಸಿಬಿಯಿಂದ ಪ್ರತ್ಯುತ್ತರ ನಿರೀಕ್ಷಿಸಬಹುದಾಗಿದೆ.
ಅಭಿಷೇಕ್ ಎಸ್