
ಚಾಂಪಿಯನ್ಸ್ ಟ್ರೋಫಿ 3ನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ದ ದಕ್ಷಿಣ ಆಫ್ರಿಕಾ 107 ರನ್ಗಳ ಭರ್ಜರಿ ಜಯ ಗಳಿಸಿದೆ. ಕರಾಚಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಿಂದಲೇ ಎಚ್ಚರಿಕೆಯ ಆಟವಾಡಿದ ರಿಕೆಲ್ಟನ್ (103) ಶತಕ ಸಿಡಿಸಿ ಸಂಭ್ರಮಿಸಿದರು. ನಂತರ ನಾಯಕ ತೆಂಬಾ ಬವುಮಾ(58),ರಸಿ ವಾನ್ ಡರ್ ಡಸೆ (52), ಏಡನ್ ಮರ್ಕರಂ (52) ಅವರ ಅರ್ಧ ಶತಕ ಬಲದಿಂದ 50 ಓವರ್ಗಳಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತ್ತು. ಅಫ್ಘಾನಿಸ್ತಾನ ಪರ ಮೊಹಮದ್ ನಬಿ 2 ವಿಕೆಟ್ ಪಡೆದರು. ಉಳಿದಂತೆ ನೂರ್ ಅಹ್ಮ,ದ್ ,ಅಜ್ಮತುಲ್ಲಾ,ಫಜಲ್ಹಕ್ ಫಾರೂಕಿ ತಲಾ 1 ವಿಕೆಟ್ ಪಡೆದರು.

ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಯಾವುದೇ ವಿಕೆಟ್ ಪಡೆಯಲಿಲ್ಲ. 316 ರನ್ಗಳ ಗುರಿ ಪಡೆದ ಅಫ್ಗಾನ್ 43.3 ಓವರ್ಗಳಲ್ಲಿ 208 ರನ್ಗಳಿಗೆ ಅಲೌಟ್ ಆಯಿತ್ತು. ರಹಮತ್ ಶಾ (90) ಅವರ ಏಕಾಂಗಿ ಹೋರಾಟ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹಶ್ಮತುಲ್ಲಾ ಶಾಹಿದಿ (0),ರಹಮಾನುಲ್ಲಾ ಗುರ್ಬಾಜ್ (10),ಇಬ್ರಾಹಿಂ ಜದ್ರಾನ್ (17), ನಬಿ (8),ರಶೀದ್ ಖಾನ್ (18). ನೂರ್ ಅಹ್ಮದ್ (18) ಕೊನೆ ಹಂತದಲ್ಲಿ ಹೋರಾಟ ಮಾಡಿದರೂ ಅಂತಿಮವಾಗಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತ್ತು. ಬೌಲಿಂಗ್ನಲ್ಲಿ ಕಗಿಸೊ ರಬಾಡ 3 ವಿಕೆಟ್ ಪಡೆದರೆ, ಲುಂಗಿ ಎನ್ಗಿಡಿ ಹಾಗೂ ವಿಯಾನ್ ಮುಲ್ಡರ್ ತಲಾ 2 ವಿಕೆಟ್ ಪಡೆದರು. ಈ ಜಯದೊಂದಿಗೆ ಆಫ್ರಿಕಾ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ ಅಫ್ಗಾನಿಸ್ತಾನ ಕೊನೆ ಸ್ಥಾನದಲ್ಲಿದೆ..
ಅಭಿಷೇಕ್ ಎಸ್