
ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಆ್ಯಷಸ್ ಎದುರಾಳಿಗಳ ಕಾದಾಟ ನಡೆಯಲಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ 2009ರ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆಸ್ಟ್ರೇಲಿಯಾಗೆ ಇದಾಗಲೇ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ಗಾಯದಿಂದ ದೊಡ್ಡ ಹೊಡೆತವೇ ಬೀರಿದೆ ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಕೊಂಚ ದುರ್ಬಲ ಎನ್ನಿಸಿದರು ಆಡಮ್ ಝಂಪಾ, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್ರಂತಹ ಬೌಲರ್ಗಳಿದ್ದಾರೆ.

ಬ್ಯಾಟಿಂಗ್ನಲ್ಲಿ ಸ್ವೀವನ್ ಸ್ಮಿತ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್,ಮ್ಯಾಥ್ಯೂ ಶಾರ್ಟ್, ಗ್ಲೆನ್ ಮ್ಯಾಕ್ಸ್ವೆಲ್ರಂತಹ ಅನುಭವಿ ಆಟಗಾರರಿದ್ದಾರೆ. ಇಂಗ್ಲೆಂಡ್ ಕೂಡ ಬಲಿಷ್ಠವಾಗಿದ್ದು ನಾಯಕ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಜೋ ರೂಟ್, ಬೆನ್ ಡಕೆಟ್,ಹ್ಯಾಟಿ ಬ್ರೂಕ್,ಲಿಯಾಮ್ ಲಿವಿಂಗ್ಸ್ಟೋನ್,ಜೋಫ್ರಾ ಅರ್ಚರ್, ಅದಿಲ್ ರಶೀದ್,ಮಾರ್ಕ್ ವುಡ್ರಂತಹ ಆಟಗಾರರಿದ್ದು ಮೇಲ್ನೋಟಕ್ಕೆ ಗೆಲ್ಲವುವ ನೆಚ್ಚಿನ ತಂಡವೆನ್ನಿಸಿಕೊಂಡಿದಾದರೂ ಹೊಡಿಬಡಿ ಆಟಗಾರನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಕಠಿಣ ಸ್ಪರ್ಧೆ ನೀಡುವುದು ಮಾತ್ರ ಸತ್ಯ. ಹೀಗಾಗಿ ಇಂದಿನ ಜಿದ್ದಾಜಿದ್ದಿಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.
ಅಭಿಷೇಕ್ ಎಸ್