
ಐಪಿಎಲ್ ಸೀಸನ್ 18ಕ್ಕೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ತನ್ನ ನೂತನ ಜೆರ್ಸಿಯನ್ನು ರಿವೀಲ್ ಮಾಡಿದೆ. ನಾಯಕ ಹಾರ್ದಿಕ್ ಪಾಂಡ್ಯ ನೂತನ ಜೆರ್ಸಿಯೊಂದಿಗೆ ಕಾಣಿಸಿಕೊಂಡಿರುವ ಪೋಟೋವನ್ನು ಮುಂಬೈ ತಂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಎಂದಿನಂತೆ ಐಕಾನಿಕ್ ಬ್ಲೂ ಕಲರ್ನಲ್ಲಿ ಅಧಿಕೃತ ಪ್ರಾಯೋಜಕತ್ವದೊಂದಿಗೆ ಮುಂಬೈ 2025ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಐಪಿಎಲ್ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರನ್ನು ಖರೀದಿ ಮಾಡಿದ್ದು 6ನೇ ಬಾರಿ ಪ್ರಶಸ್ತಿ ಜಯಿಸುವತ್ತ ಕಣ್ಣಿಟ್ಟಿದೆ. ತಂಡದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪೀತ್ ಬೂಮ್ರಾ, ತಿಲಕ್ವರ್ಮಾ, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್ರಂತಹ ಆಟಗಾರರನ್ನು ಹೊಂದಿದೆ. ಮಾರ್ಚ್ 23ರಂದು ಸಿಎಸ್ಕೆ ವಿರುದ್ದ ಮುಂಬೈ ತನ್ನ ಮೊದಲ ಪಂದ್ಯ ಆಡಲಿದೆ..
ಅಭಿಷೇಕ್ ಎಸ್