
Tata WPL 2025
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸಿನ್ 3ರರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗುಜರಾತ್ ತಂಡ ಆಡಿರುವ 3 ಪಂದ್ಯಗಳ ಪೈಕಿ 1 ಗೆದ್ದು 2 ಪಂದ್ಯದಲ್ಲಿ ಸೋತಿದೆ. ಪ್ಲೇ ಆಫ್ ಹಂತಕ್ಕೆ ಹೋಗಬೇಕಾದರೆ ಈ ಪಂದ್ಯದಲ್ಲಿ ಜಯ ಅನಿವಾರ್ಯ. ಮತ್ತೊಂದೆಡೆ ಕಳೆದ ಎರಡು ಸೀಸನ್ಗಳಲ್ಲಿ ಪ್ರಶಸ್ತಿ ಸುತ್ತಿನವರೆಗೂ ಹೋಗಿ ನಿರಾಸೆ ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 4 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 2ರಲ್ಲಿ ಸೋಲನುಭವಿಸಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದಾಗಿದ್ದು ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಬಹುದಾಗಿದೆ, ಡೆಲ್ಲಿ ತಂಡದಲ್ಲಿ ನಾಯಕಿ ಮೆಗ್ ಲ್ಯಾನಿಂಗ್, ಸಾರಾ ಬ್ರೈಸ್, ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಅರುಂಧತಿ ರೆಡ್ಡಿರಂತಹ ಆಟಗಾರರಿದ್ದಾರೆ. ಇನ್ನು ಗುಜರಾತ್ ತಂಡದಲ್ಲಿ ಬೆತ್ ಮೂನಿ,ಆಶ್ಲೀ ಗಾರ್ಡ್ನರ್, ಲಾರಾ ವೊಲ್ವಾರ್ಡ್ವ್,ದಯಾಳನ್ ಹೇಮಲತಾ, ಹರ್ಲೀನ್ ಡಿಯೋಲ್ರಂತಹ ಸ್ಟಾರ್ ಆಟಗಾರರರಿದ್ದು ಗುಜರಾತ್ ತಂಡದ ಪ್ರಮುಖ ಶಕ್ತಿಯೆನ್ನಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ..

ಅಭಿಷೇಕ್.ಎಸ್