
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಎ ಯಿಂದ ಸೆಮಿಫೈನಲ್ ಪ್ರವೇಶ ಮಾಡುವ ತಂಡಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟೂರ್ನಿಯಲ್ಲಿ ಇನ್ನೂ ಕೆಲವು ಪಂದ್ಯಗಳು ಬಾಕಿ ಇರುವಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿವೆ. ಇದಕ್ಕೆ ಪ್ರಮುಖ ಕಾರಣ ಬಾಂಗ್ಲಾದೇಶ ವಿರುದ್ದ ನ್ಯೂಜಿಲೆಂಡ್ ಗೆಲುವು ಸಾಧಿಸಿದ್ದು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲದೇಶ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಕಲೆ ಹಾಕಿತ್ತು. 237 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಕಿವೀಸ್ ಪಡೆ ರಚಿನ್ ರವೀಂದ್ರ ಅವರ ಶತಕದ ಬಲದಿಂದ 46.1 ಓವರ್ಗಳಲಿಯೇ 237 ರನ್ಗಳನ್ನು ಸುಲಭವಾಗಿ ಮುಟ್ಟಿತ್ತು. ವಿಲ್ ಯಂಗ್ (0), ಡೆವೊನ್ ಕಾನ್ವೇ (30), ಕೇನ್ ವಿಲಿಯಮ್ಸ್ನ್ (5), ಟಾಮ್ ಲಾಥಮ್ (55) ಮಿಚೆಲ್ ಬ್ರೇಸ್ವೆಲ್ (11) ಔಟ್ ಆಗದೇ ಉಳಿದರು. ಆಡಿದ 2 ಪಂದ್ಯಗಳಲ್ಲಿ 2ರಲ್ಲೂ ಜಯ ಗಳಿಸಿದ ಕಿವೀಸ್ ಸೆಮಿ ಫೈನಲ್ ಪ್ರವೇಶ ಮಾಡಿದೆ..

ಅಭಿಷೇಕ್. ಎಸ್