
ಐಪಿಎಲ್ ಸೀಸನ್ 18ರಲ್ಲಿ ಸಿಎಸ್ಕೆ ತಂಡದ ಬೌಲಿಂಗ್ ಸಹಾಯಕ ಕೋಚ್ ಆಗಿ ಭಾರತ ತಂಡದ ಅಲ್ರೌಂಡರ್ ಶ್ರೀಧರನ್ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಅವರು ಮೂಂದಿನ ಸೀಸನ್ನಲ್ಲಿ ಚನ್ನೈ ಸೂಪರ್ ಕಿಂಗ್ಸ್ನ ಭಾಗವಾಗಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಡೆಗೈ ಸ್ಪಿನ್ನರ್ ಆಗಿರುವ ಶ್ರೀರಾಮ್ ಐಪಿಎಲ್ನಲ್ಲಿ ಈ ಹಿಂದೆ ಆರ್ಸಿಬಿ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಚೆನ್ನೈ ಜೊತೆ ತಮ್ಮ ಹೊಸ ಜರ್ನಿ ಶುರು ಮಾಡಿದ್ದಾರೆ. ಕೆಕೆಆರ್ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡಿರುವ ಡ್ವೇನ್ ಬ್ರೇವೋ ಸ್ಥಾನವನ್ನು ಶ್ರೀರಾಮ್ ತುಂಬಲಿದ್ದಾರೆ. ಹೆಡ್ ಕೋಚ್ ಸ್ಟೇಫನ್ ಫ್ಮೆಮಿಂಗ್, ಮೈಕ್ ಹಸಿ , ಎರಿಕ್ ಸಿಮನ್ಸ್ ಜೊತೆ ಒಟ್ಟಗೆ ಕೆಲಸ ಮಾಡಲಿದ್ದಾರೆ. ಈ ಬಾರಿ ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ಶ್ರೇಯಸ್ ಗೋಪಾಲ್, ದೀಪಕ್ ಹೂಡ, ನೂರ್ ಅಹ್ಮದ್, ರಚಿನ್ ರವೀಂದ್ರರಂತಹ ಪ್ರಮುಖ ಸ್ಪಿನ್ನರ್ಗಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ದ ತನ್ನ ಮೊದಲ ಪಂದ್ಯನ್ನಾಡಲಿದೆ.

ಅಭಿಷೇಕ್.ಎಸ್