
ಭಾರತ ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ಕಿಂಗ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ 51 ಶತಕ ಬಾರಿಸಿದರು. ಆ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುವುದರ ಮೂಲಕ ಹಲವು ದಿನಗಳಿಂದ ಎದುರಿಸಿದ್ದ ಫಾರ್ಮ್ ಸಮಸ್ಯೆಗೆ ಫುಲ್ ಸ್ಟಾಪ್ ಇಟ್ಟರು. ಈ ವೇಳೆ ತಮ್ಮ ನೆಚ್ಚಿನ ಕವರ್ ಡ್ರೈವ್ ಬಾರಿಸುವಲ್ಲಿಯೂ ಸಕ್ಸಸ್ ಆಗಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಕೊಹ್ಲಿ ಕವರ್ ಡ್ರೈವ್ ಪ್ರಯಓಗ ಮಾಡುವಾಗಲೇ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆದರೆ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಕವರ್ ಡ್ರೈವ್ ಹೊಡೆತಗಳ ಮೂಲಕ ಸೆಂಚುರಿ ಬಾರಿಸಿದ್ದರು. ಕೆಲವು ವರ್ಷಗಳಿಂದ ಕವರ್ ಡ್ರೈವ್ ಆಡುವುದು ನನ್ನ ದೌರ್ಬಲ್ಯವಾಗಿತ್ತು. ಆದರೆ ಪಾಕ್ ವಿರುದ್ದ ಅದೇ ಹೊಡೆತದ ಮೂಲಕ ಸಾಕಷ್ಟು ರನ್ ಗಳಿಸಿದೆ. ಕ್ರೀಸ್ಗೆ ಬಂದ ಆರಂಭದಲ್ಲಿ ಹೊಡೆದ 2 ಬೌಂಡರಿಗಳು ಕವರ್ ಡ್ರೈವ್ನಿಂದ ಬಂದಿದ್ದವು. ವಿಶ್ವಾಸ ಕುದುರಿತು. ಅಂತಹ ಶಾಟ್ಗಳನ್ನೇ ಆಡಇದೆ. ಇದರಿಂದಾಗಿ ಆಟದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ಬಿಸಿಸಿಐ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ವಿಡಿಯೊದಲ್ಲಿ ಕೊಹ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಭಿಷೇಕ್.ಎಸ್